ADVERTISEMENT

ವಿದ್ಯುತ್ ಬಿಲ್‌: ವಿಳಂಬ ಪಾವತಿಗೆ ದಂಡವಿಲ್ಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 15:37 IST
Last Updated 22 ಮಾರ್ಚ್ 2024, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಆನ್‌ಲೈನ್ ಸೇವೆಗಳು ಸ್ಥಗಿತಗೊಂಡ ಅವಧಿಯಲ್ಲಿ ವಿದ್ಯುತ್‌ ಬಿಲ್‌ ಪಾವತಿಸಲು ಗ್ರಾಹಕರಿಗೆ ಸಾಧ್ಯವಾಗಿಲ್ಲ. ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸದಿರಲು ಇಂಧನ ಇಲಾಖೆಯು ನಿರ್ಧರಿಸಿದೆ.

ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ (ಸಾಫ್ಟ್‌ವೇರ್‌) ವ್ಯವಸ್ಥೆಯ ಉನ್ನತೀಕರಣ ಕಾರ್ಯ ಪೂರ್ಣಗೊಂಡಿದೆ. ಎಲ್ಲ ಎಸ್ಕಾಂಗಳ, ಸ್ಥಗಿತಗೊಂಡಿದ್ದ ಆನ್‌ಲೈನ್ ವಿದ್ಯುತ್ ಸೇವೆಗಳು ಪುನರ್ ಆರಂಭಗೊಂಡಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಸಾಫ್ಟ್‌ವೇರ್‌ ಉನ್ನತೀಕರಣಕ್ಕಾಗಿ ಮಾರ್ಚ್‌ 10 ರಿಂದ 19ರವರೆಗೆ ಎಲ್ಲ ಎಸ್ಕಾಂಗಳ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮಾ.20ರಂದು ಸೇವೆಗಳು ಪುರಾರಂಭಗೊಳಿಸಲಾಗಿತ್ತು. ಹತ್ತು ದಿನ ಸ್ಥಗಿತಗೊಂಡಿದ್ದ ಕಾರಣ ಹೆಚ್ಚಿನ ಗ್ರಾಹಕರು ಏಕಕಾಲಕ್ಕೆ ವಿದ್ಯುತ್ ಬಿಲ್ ಪಾವತಿಗಾಗಿ ಮುಂದಾಗಿದ್ದರು.

‘ಈ ಕಾರಣದಿಂದಾಗಿ ಸರ್ವರ್ ಓವರ್ ಲೋಡ್ ಆಗಿ, ಸೇವೆಯಲ್ಲಿ ತುಸು ವ್ಯತ್ಯಯವಾಗಿತ್ತು. ಅದನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸವೂ ನಡೆಯುತ್ತಿದೆ. ಮಾ.30ರೊಳಗೆ ಎಲ್ಲ ಆನ್‌ಲೈನ್‌ ವಿದ್ಯುತ್ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ’ ಎಂದೂ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.