ADVERTISEMENT

ಶ್ರೀಲಂಕಾದಲ್ಲಿ‌ ಅಪರಾಧ ಎಸಗಿ ಭಾರತಕ್ಕೆ ನುಸುಳಿದ್ದ ಮೂವರು ಬೆಂಗಳೂರಿನಲ್ಲಿ‌ ಸೆರೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 5:24 IST
Last Updated 24 ಆಗಸ್ಟ್ 2023, 5:24 IST
ಸಿಸಿಬಿ (ಸಂಗ್ರಹ ಚಿತ್ರ)
ಸಿಸಿಬಿ (ಸಂಗ್ರಹ ಚಿತ್ರ)    

ಬೆಂಗಳೂರು: ಶ್ರೀಲಂಕಾದಲ್ಲಿ‌ ಅಪರಾಧ ಎಸಗಿ ಭಾರತದೊಳಗೆ ಅಕ್ರಮಮವಾಗಿ ನುಸುಳಿದ್ದ ಮೂವರು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಯಲಹಂಕದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಮೇಲೆ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ದಾಳಿ ಮಾಡಿದ್ದು, ಅಲ್ಲಿಯ ಫ್ಲ್ಯಾಟ್‌ನಲ್ಲಿದ್ದ ಮೂವರನ್ನು ಬಂಧಿಸಿದ್ದಾರೆ.

'ಕಾಸಿನ್‌ಕುಮಾರ್, ಅಮಿಲ್ ನುವಾನ್, ರಂಗ ಪ್ರಸಾದ್ ಹಾಗೂ ಇವರಿಗೆ ಆಶ್ರಯ ನೀಡಿದ್ದ ಜೈ ಪರಮೇಶ್ ಅವರನ್ನು ಬಂಧಿಸಲಾಗಿದೆ' ಎಂದು ಸಿಸಿಬಿ‌ ಮೂಲಗಳು ಹೇಳಿವೆ.

ADVERTISEMENT

'4 ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಕಾಸಿನ್, ಅಮಿಲ್ ಹಾಗೂ ರಂಗಪ್ರಸಾದ್‌ಗಾಗಿ ಶ್ರೀಲಂಕಾ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಬಂಧನ ಭೀತಿಯಲ್ಲಿದ್ದ ಮೂವರು, ಸಮುದ್ರ ಮಾರ್ಗವಾಗಿ ಬೋಟ್ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು.'

'ಮೂವರು ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಲಾಯಿತು. ಮೂವರನ್ನು ಬಂಧಿಸಿ, ಅದರ ಜೊತೆ ಆಶ್ರಯ ನೀಡಿದ್ದವನನ್ನು ಸೆರೆ ಹಿಡಿಯಲಾಗಿದೆ' ಎಂದು ಸಿಸಿಬಿ ಮೂಲಗಳು ಹೇಳಿವೆ.

'ಬಂಧಿತರಿಂದ 13 ಮೊಬೈಲ್, ಗುರುತಿನ ಚೀಟಿಗಳು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.