ADVERTISEMENT

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಗೆ ಮೂರು ಠಾಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:22 IST
Last Updated 3 ಜೂನ್ 2025, 15:22 IST
   

ಬೆಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಗೆ ಮತ್ತೆ ಮೂರು ಪೊಲೀಸ್ ಠಾಣೆಗಳು ಸೇರ್ಪಡೆಗೊಂಡಿದ್ದು, ಮಂಗಳವಾರದಿಂದಲೇ ನಗರ ವ್ಯಾಪ್ತಿಯಲ್ಲಿ ಕಾರ್ಯಾರಂಭ ಮಾಡಿವೆ.

ಬೆಂಗಳೂರು ನಗರ ಜಿಲ್ಲೆಯ ಆವಲಹಳ್ಳಿ, ಹೆಬ್ಬಗೋಡಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಕುಂಬಳಗೋಡು ಪೊಲೀಸ್ ಠಾಣೆಗಳು ಸೇರ್ಪಡೆ ಆಗಿವೆ.

ಇದುವರೆಗೂ ಆವಲಹಳ್ಳಿ, ಹೆಬ್ಬಗೋಡಿ ಹಾಗೂ ಕುಂಬಳಗೋಡು ಠಾಣೆಗಳಲ್ಲಿ ಆಯಾ ಜಿಲ್ಲಾಡಳಿತ ಹಾಗೂ ಎಸ್‌‍ಪಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಮಂಗಳವಾರದಿಂದ ಕಮಿಷನರೇಟ್ ವ್ಯಾಪ್ತಿಗೆ ಒಳಪಟ್ಟಿವೆ. ಮೂರು ಠಾಣೆಗಳನ್ನು ಫೆಬ್ರುವರಿ 6ರಂದು ಸೇರ್ಪಡೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಆದೇಶ ಮಂಗಳವಾರದಿಂದ ಜಾರಿಗೆ ಬಂದಿದೆ.

ADVERTISEMENT

ಸಾರ್ವಜನಿಕರು ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಆವಲಹಳ್ಳಿ 080 28472500, 9480802473, ಹೆಬ್ಬಗೋಡಿ 080 27832922, 9480802451, ಕುಂಬಳಗೋಡು 080 28437599, 9480802854 ಸಂಪರ್ಕಿಸಬಹುದು ಎಂದು ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.