ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
   

‘ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್ (ವಿಬಿಎಸ್‌ಎ) ಮಸೂದೆ’ ಕುರಿತ ದುಂಡು ಮೇಜಿನ ಸಭೆ: ಆಯೋಜನೆ: ಭಾರತೀಯ ಶಿಕ್ಷಣ ಮಂಡಲ, ಸ್ಥಳ: ದಿ ಮಿಥಿಕ್‌ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 9 

21ನೇ ವರ್ಷದ ವಾರ್ಷಿಕೋತ್ಸವ ಹಾಗೂ 20ನೇ ಬ್ರಹ್ಮರಥೋತ್ಸವ: ಬೆಳಿಗ್ಗೆ 8ರಿಂದ ಪಂಚಾಮೃತಾಭಿಷೇಕ ಪೂಜೆ, ಅಲಂಕಾರ, ರಥಾಲಂಕಾರ ಸೇವೆ, ಮಧ್ಯಾಹ್ನ 1.07ಕ್ಕೆ ಬ್ರಹ್ಮರಥೋತ್ಸವ, ಸಂಜೆ 7ಕ್ಕೆ ತರಂಗಿಣಿ ತಂಡದಿಂದ ಭರತನಾಟ್ಯ, ರಾತ್ರಿ 8ರಿಂದ ‘ಮಹಿಷಾಸುರ ಮರ್ಧಿನಿ’ ಯಕ್ಷಗಾನ ಪ್ರಸಂಗ, ರಾತ್ರಿ 11.30ರಿಂದ ಪಲ್ಲಕ್ಕಿ ಉತ್ಸವ, ಆಯೋಜನೆ ಹಾಗೂ ಸ್ಥಳ: ಸ್ಫೂರ್ತಿ ವಿನಾಯಕ ಸಹಿತ ಸತ್ಯನಾರಾಯಣ ಸ್ವಾಮಿ ದೇವಾಲಯ, ಹುಳಿಮಾವು, ಬನ್ನೇರುಘಟ್ಟ

ಸ್ವಾಭಿಮಾನ ಚಳವಳಿಯ ಶತಮಾನೋತ್ಸವ: ಅಧ್ಯಕ್ಷತೆ: ಕೆ. ವೀರಮಣಿ, ಉದ್ಘಾಟನೆ: ಎಚ್.ಸಿ. ಮಹದೇವಪ್ಪ, ಪ್ರಾಸ್ತಾವಿಕ ನುಡಿ: ಬಿ.ಕೆ. ಹರಿಪ್ರಸಾದ್, ಭಾಷಣ: ಎಚ್.ಎನ್. ನಾಗಮೋಹನದಾಸ್, ರವಿವರ್ಮ ಕುಮಾರ್, ರಿಜ್ವಾನ್ ಅರ್ಷದ್, ಆಯೋಜನೆ: ಕರ್ನಾಟಕ ರಾಜ್ಯ ದ್ರಾವಿಡ ಕಳಗಂ, ಸ್ಥಳ: ದೇವರಾಜ ಅರಸು ಭವನ, ವಸಂತನಗರ, ಬೆಳಿಗ್ಗೆ 10

ADVERTISEMENT

ನಾಲ್ಕು ಪುಸ್ತಕಗಳ ಬಿಡುಗಡೆ: ಎಚ್.ಎನ್. ಆನಂದ ಅವರ ‘ರಿವರ್ಸ್ ಲಂಚ’, ಮಧುರಾ ಕರ್ಣಮ್ ಅವರ ‘ಕಣ್ಣಾಮುಚ್ಚೇ ಕಾಡೇ ಗೂಡೇ’, ಶೋಭಾ ಪುರೋಹಿತ್ ಅವರ ‘ಭಾವನೆಯ ಬಲೆಯಲ್ಲಿ’, ಕೆ.ವಿ. ಶಶಿಧರ ಅವರ ‘ಮೆಟ್ರೋ ಟ್ರೈನ್’ ಪುಸ್ತಕಗಳ ಬಿಡುಗಡೆ, ಪುಸ್ತಕಗಳ ಪರಿಚಯ: ವೈ.ವಿ. ಗುಂಡೂರಾವ್, ನಾ. ದಾಮೋದರ ಶೆಟ್ಟಿ, ನಾಗೇಶ್ ಕುಮಾರ್, ರಾಸು ವೆಂಕಟೇಶ್, ಉಪಸ್ಥಿತಿ: ರಾಮನಾಥ್, ಆಯೋಜನೆ: ತೇಜು ಪಬ್ಲಿಕೇಷನ್ಸ್, ನ್ಯೂ ವೇವ್‌ ಬುಕ್ಸ್, ಸ್ಥಳ: ಆರ್ಯ ಸಮಾಜ, ಶ್ರದ್ಧಾನಂದ ಭವನ ಅಡ್ಡರಸ್ತೆ, ವಿಶ್ವೇಶ್ವರಪುರ, ಬೆಳಿಗ್ಗೆ 10

ಭೂಮಿ ರೈತ ಪ್ರಶಸ್ತಿ ವಿತರಣಾ ಸಮಾರಂಭ: ಅತಿಥಿಗಳು: ಜಿ.ಟಿ.ಪುತ್ರ, ಸಿ.ಎನ್. ಶಿವಪ್ರಕಾಶ್, ಆಯೋಜನೆ: ಸಹಜಾನಂದ ಕಂಪ್ಯೂಟರ್ ಆಧಾರಿತ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 10

ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ‘ರಾಮನ್ ಪರಿಣಾಮ’ದ ಆವಿಷ್ಕಾರದ ಸ್ಮರಣಾರ್ಥ ಮುಕ್ತ ದಿನ (ಓಪನ್ ಡೇ): ವಿಜ್ಞಾನ ಪ್ರದರ್ಶನ ಹಾಗೂ ಕ್ಯಾಂಪಸ್‌ ದರ್ಶನ, ಆಯೋಜನೆ ಹಾಗೂ ಸ್ಥಳ: ರಾಮನ್ ರಿಸರ್ಚ್‌ ಇನ್‌ಸ್ಟಿಟ್ಯೂಟ್, ಸದಾಶಿವನಗರ, ಬೆಳಿಗ್ಗೆ 10ರಿಂದ ಸಂಜೆ 4

12ನೇ ಶತಮಾನದ ವಚನಕಾರ್ತಿಯರ ಕುರಿತು ಕಮ್ಮಟ: ಬೆಳಿಗ್ಗೆ 10ರಿಂದ ಗೋಷ್ಠಿಗಳು, ಆಶಯ ನುಡಿ: ಎಂ. ಉಷಾ, ಗೋಷ್ಠಿಯಲ್ಲಿ ಭಾಗವಹಿಸುವವರು: ಆರ್. ಸುನಂದಮ್ಮ, ಸುನಂದ ರು. ಬಸಪ್ಪ, ಇಂದಿರಾ ಶಿವಣ್ಣ, ಸಂಜೆ 4ಕ್ಕೆ ಸಮಾರೋಪ ಸಮಾರಂಭ: ಭಾಷಣ: ಸಿ. ಸೋಮಶೇಖರ್, ಅಧ್ಯಕ್ಷತೆ: ಆರ್. ಸುನಂದಮ್ಮ, ಅತಿಥಿ: ಆರ್. ಪೂರ್ಣಿಮಾ, ಆಯೋಜನೆ: ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ಚಿಂತನ ಮಂಟಪ, ಜಗದ್ಗುರು ಶಿವರಾತ್ರೀಶ್ವರ ವೃತ್ತ, ಜಯನಗರ 8ನೇ ಬ್ಲಾಕ್

‘ವಚನಾಸ್ ಆಫ್ ಅಲ್ಲಮಪ್ರಭು’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಉದ್ಘಾಟನೆ: ಎಂ.ಬಿ. ಪಾಟೀಲ, ಅಧ್ಯಕ್ಷತೆ: ಬಸವರಾಜ ಬೊಮ್ಮಾಯಿ, ಪುಸ್ತಕ ಬಿಡುಗಡೆ: ಕೃಷ್ಣ ದೀಕ್ಷಿತ್, ಕೃತಿ ಪರಿಚಯ: ಮಲ್ಲೇಪುರಂ ಜಿ. ವೆಂಕಟೇಶ, ಅತಿಥಿಗಳು: ಗೊ.ರು. ಚನ್ನಬಸಪ್ಪ, ಡಿ.ಆರ್. ಪಾಟೀಲ, ಸಿ. ಸೋಮಶೇಖರ್, ಸಿ.ಎಸ್. ಷಡಾಕ್ಷರಿ, ಆಯೋಜನೆ: ಜೆಎಎಸ್‌ ಮಹಾವಿದ್ಯಾಲಯ, ಸ್ಥಳ: ಶಿವರಾತ್ರೀಶ್ವರ ಕೇಂದ್ರ, ಜೆಎಸ್ಎಸ್ ವೃತ್ತ, ಜಯನಗರ 8ನೇ ಬ್ಲಾಕ್, ಬೆಳಿಗ್ಗೆ 10.30 

ಫೋಟೊ ಹಬ್ಬ: ಛಾಯಾಚಿತ್ರಗಳ ಪ್ರದರ್ಶನ ಹಾಗೂ ಶ್ರೀನಿವಾಸ ಮೂರ್ತಿ ಎನ್‌.ಎಸ್. ಅವರ ‘ರಮಣೀಯ ರಾಜಸ್ಥಾನ’ ಪುಸ್ತಕ ಬಿಡುಗಡೆ: ಅತಿಥಿಗಳು: ಈಶಪ್ರಿಯ ತೀರ್ಥ ಸ್ವಾಮೀಜಿ, ಮುರಿಗೆಪ್ಪ, ವಿನಾಯಕ ಜೋಶಿ, ಆಯೋಜನೆ: ಎನ್‌ಟಿಎಂಎಲ್‌ ಗ್ರೂಪ್, ಸ್ಥಳ: ದೇವರಾಜ ಅರಸು ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಬೆಳಿಗ್ಗೆ 10.30

6ನೇ ಅಖಿಲ ಭಾರತ ಸಮ್ಮೇಳನ: ಉದ್ಘಾಟನೆ: ಪಿ. ಸಾಯಿನಾಥ್, ಅತಿಥಿಗಳು: ಎಸ್.ಕೆ. ಕಾಂತಾ, ಕರೇಹಳ್ಳಿ ಶ್ರೀನಿವಾಸ್, ಎಸ್. ರೇವಣ್ಣ, ಅಧ್ಯಕ್ಷತೆ: ಬಿ. ನಾಗರಾಜು, ಆಯೋಜನೆ: ಕೆನರಾ ಬ್ಯಾಂಕ್ ಸ್ಟಾಫ್ ಫೌಂಡೇಷನ್, ಸ್ಥಳ: ಟೌನ್‌ ಹಾಲ್, ಜೆ.ಸಿ.ರಸ್ತೆ, ಬೆಳಿಗ್ಗೆ 10.30

ದತ್ತಿ ಪ್ರಶಸ್ತಿಗಳ ಪ್ರದಾನ: ಕೆ.ಆರ್. ಸಂಧ್ಯಾ ರೆಡ್ಡಿ, ಅತಿಥಿ: ಆರ್. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ‘ಪ್ರೊ.ಎಲ್.ಎಸ್. ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ’ ಪುರಸ್ಕೃತರು: ಟಿ.ಪಿ. ಅಶೋಕ, ‘ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’ ಪುರಸ್ಕೃತರು: ನಾಗಮಣಿ ಎಸ್. ರಾವ್, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಅ.ನ. ಯಲ್ಲಪ್ಪ ರೆಡ್ಡಿ ಅವರಿಗೆ ಗೌರವಾಭಿನಂದನೆ ಹಾಗೂ ‘ಸಮೃದ್ಧವಾಗಲಿ ಭೂತಾಯ ಒಡಲು’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ಜಯೇಂದ್ರಪುರಿ ಸ್ವಾಮೀಜಿ, ಪುಸ್ತಕ ಬಿಡುಗಡೆ: ಬಿ. ದಯಾನಂದ, ಅತಿಥಿ: ಲಕ್ಷ್ಮೀಶ ತೋಳ್ಪಾಡಿ, ಆಯೋಜನೆ: ಕೃಷಿ ಭಾರತ ಫೌಂಡೇಷನ್, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ಪ್ರಕ್ರಿಯೆ ಮಹಿಳೆಯರ ಮೇಲೆ ಬೀರುವ ಪರಿಣಾಮದ ಬಗ್ಗೆ ಸಭೆ: ಆಯೋಜನೆ: ನನ್ನ ಮತ ನನ್ನ ಹಕ್ಕು, ಸ್ಥಳ: ಎಐಟಿಯುಸಿ ರಾಜ್ಯ ಸಮಿತಿ ಕಚೇರಿ, ಶಿರೂರು ಪಾರ್ಕ್ ರಸ್ತೆ, ಶೇಷಾದ್ರಿಪುರ, ಬೆಳಿಗ್ಗೆ 11

ಮೊರಾರ್ಜಿ ದೇಸಾಯಿ ಅವರ ಜನ್ಮದಿನಾಚರಣೆ ಹಾಗೂ ಚಿಂತನ–ಮಂಥನ ಸಭೆ: ಅಧ್ಯಕ್ಷತೆ: ಎಂ.ಪಿ. ನಾಡಗೌಡ, ಪುಷ್ಪನಮನ: ವಾಣಿ ಎನ್. ಶೆಟ್ಟಿ, ಉಪಸ್ಥಿತಿ: ಶ್ರೀನಿವಾಸ್ ಎಸ್., ಆಯೋಜನೆ: ಜನತಾ ಪಕ್ಷ, ಸ್ಥಳ: ವಿಧಾನ ಪರಿಷತ್ ಸಭಾಂಗಣ, ಶಾಸಕರ ಭವನ–1, ಬೆಳಿಗ್ಗೆ 11.30

8ನೇ ವಾರ್ಷಿಕೋತ್ಸವದ ಪ್ರಯುಕ್ತ ಗಾಯನ–ನಾಟಕ: ಉದ್ಘಾಟನೆ: ದೊಡ್ಡಮನೆ ವೆಂಕಟೇಶ್, ಅತಿಥಿಗಳು: ರಾಮಚಂದ್ರರಾವ್, ಎಂ.ವಿ. ಶಂಕರ್, ಕೆ.ಮುನಿರಾಜು, ಆರ್. ಮುನಿಸ್ವಾಮಿ, ಆರ್. ಕೇಶವಮೂರ್ತಿ, ಗೀತ ಗಾಯನ: ಪಿ.ರುದ್ರಪ್ಪ ಮತ್ತು ತಂಡ, ನಾಟಕ: ‘ಪಶ್ಚಾತಾಪ’, ಆಯೋಜನೆ: ಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3 

ಗಾನ ಕುಸುಮಾಂಜಲಿ: ಮಹಿಳೆಯರ ರಾಜ್ಯಮಟ್ಟದ ಗಾಯನ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಸಮಾರಂಭ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ಅತಿಥಿಗಳು: ಎಂ.ಮುನಿರಾಜು, ಆರ್.ವಿ. ರಾಘವೇಂದ್ರ, ಡಿ. ಶ್ರೀನಾಥ್, ಎಸ್. ಮಂಜುನಾಥ್ ರಾಮಸಾಗರ, ಆಯೋಜನೆ: ಪರಂಪರಾ ಕಲ್ಚರಲ್ ಫೌಂಡೇಷನ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

54ನೇ ವಾರ್ಷಿಕೋತ್ಸವ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅತಿಥಿಗಳು: ಅಶೋಕ್ ಡಿ.ಆರ್., ಎಂ.ಆರ್. ಚಂದ್ರಶೇಖರ್, ಅಧ್ಯಕ್ಷತೆ: ಪ್ರಕಾಶ್ ವಾಸು, ಆಯೋಜನೆ ಹಾಗೂ ಸ್ಥಳ: ಬಾಲ ಮನೋ ವಿಕಾಸ ಕೇಂದ್ರ, ಮಲ್ಲೇಶ್ವರ, ಸಂಜೆ 4

‘ಕಲಾ ಸ್ಪಂದನ’ ಶಾಸ್ತ್ರೀಯ ಸಂಗೀತ–ನೃತ್ಯ ತಿಂಗಳ ಕಾರ್ಯಕ್ರಮ: ಅತಿಥಿ: ಸತ್ಯನಾರಾಯಣ ರಾಜು, ಉಪಸ್ಥಿತಿ: ಸತೀಶ್ ಹಂಪಿಹೊಳಿ, ಕಥಕ್ ನೃತ್ಯ ಪ್ರದರ್ಶನ: ಸುದೀಪ್ತ ಜಿ., ಪ್ರೀತಿ ಚೌಧರಿ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ: ಪೂರ್ಣಾ ಹೆಬ್ಬಾರ್, ಪ್ರಜ್ಞಾ ಹೆಬ್ಬಾರ್, ತಬಲಾ: ರೋಹನ್ ಕುಮಾರ್, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್, ಅಲಂಕೃತ ಸೆಂಟರ್ ಫಾರ್‌ ಪರ್ಫಾರ್ಮಿಂಗ್ ಆರ್ಟ್ಸ್‌, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರದ 5ನೇ ಬ್ಲಾಕ್‌, ಸಂಜೆ 5 

ನೃತ್ಯಾರ್ಪಣೆ: ವರ್ಷಾ ಎನ್.ಕುಮಾರ್, ಗುರು: ನಾಗಭೂಷಣ, ಅತಿಥಿಗಳು: ಕೃಷ್ಣ ಬೈರೇಗೌಡ, ಎನ್. ಶಿವಶಂಕರ್, ಎನ್.ಎಸ್. ಪಾಟೀಲ, ಥಾಮಸ್ ವಿ. ಥೇನಾದಿಯಾಲ್, ಜೋಸೆಫ್ ಎಸ್., ಆಯೋಜನೆ: ಆರಾಧನಾ ನೃತ್ಯ ಶಾಲೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5

ಭಾಗವತ ಚಿಂತನ ಕಾರ್ಯಕ್ರಮ: ಉಪನ್ಯಾಸ: ಗಣೇಶ ಭಟ್ಟ, ಆಶೀರ್ವಚನ: ಶಿವಕಾಂತಾನಂದ ಸ್ವಾಮೀಜಿ, ಅಧ್ಯಕ್ಷತೆ: ಎಸ್.ಕೆ. ಗೋಪಾಲಕೃಷ್ಣ, ಅತಿಥಿ: ಎಚ್. ಸುಂದರಮೂರ್ತಿ, ಆಯೋಜನೆ: ಶ್ರೀನಿವಾಸ ಸಹೋದರರ ಸಂಘ, ಸ್ಥಳ: ಜಯರಾಮ ಸೇವಾ ಮಂಡಳಿ, ಜಿ.ವಿ. ಜನ್ಮಶತಾಬ್ದಿ ಕಲಾಕೇಂದ್ರ, ಜಯನಗರ 8ನೇ ಬಡಾವಣೆ, ಸಂಜೆ 5.30

ಚಲನಚಿತ್ರ ಗೀತೆಗಳ ಗಾಯನ: ಆಯೋಜನೆ: ಎಟಿಎಂ ತಂಡ, ಕಲಾಭೂಮಿ, ಸ್ಥಳ: ಬೆಂಗಳೂರು ದಕ್ಷಿಣ ಪಾಲಿಕೆ ಕಚೇರಿ ಆವರಣ, ಆರ್‌ಬಿಐ ಲೇಔಟ್, ಜೆ.ಪಿ.ನಗರ 7ನೇ ಹಂತ, ಸಂಜೆ 5.30

‘ಶ್ರೀಕೃಷ್ಣ ಸಂಧಾನ’ ಯಕ್ಷಗಾನ ತಾಳಮದ್ದಳೆ: ಹಿಮ್ಮೇಳ: ರಕ್ಷಿತ್ ಭಟ್ಟ ಮೂರೂರು, ಆಗ್ನೇಯ ಭಟ್ ಕ್ಯಾಸನೂರು, ನಾರಾಯಣ ಮೂರ್ತಿ ಹೊಸಬಾಳೆ, ಶ್ರೀರಮಣ ಭಟ್ಟ ಮೂರೂರು, ಮುಮ್ಮೇಳ: ಶಿವಕುಮಾರ್ ಬೇಗಾರ್, ರವಿ ಐತುಮನೆ, ಚಂದನ್ ಕಲಾಹಂಸ, ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: ಮಹಾಲಕ್ಷ್ಮೀ ದೇವಸ್ಥಾನ, ವಲ್ಲಭ ನಗರ, ಕೋಣನಕುಂಟೆ ಕ್ರಾಸ್‌ ಬಳಿ, ಸಂಜೆ 5.30

ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಸಮಾರಂಭ: ರೇಣುಕಾ ಯಲ್ಲಮ್ಮ ದೇವಿಗೆ ವಾಸ್ತುಹೋಮ, ವಾಸ್ತುಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಯೋಜನೆ: ಮಹಿಷಿ ವರ್ಧಿನಿ ಮತ್ತು ರೇಣುಕಾ ಯಲ್ಲಮ್ಮದೇವಿ ಚಾರಿಟಬಲ್ ಟ್ರಸ್ಟ್, ಸ್ಥಳ: ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ, ಮಂಚನಹಳ್ಳಿ ಗ್ರಾಮ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಹೊಸೂರು ರಸ್ತೆ, ಸಂಜೆ 6

ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮ: ಆರ್. ಅರ್ಜುನ್ ಸಾಂಬಸಿವನ್, ಆರ್. ನಾರಾಯಣನ್, ಹೃಷಿತ ಕೇದಗೆ, ಲೋಕಪ್ರಿಯ, ಎನ್. ಗುರುಮೂರ್ತಿ, ಆಯೋಜನೆ: ಮಲ್ಲೇಶ್ವರ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಮಲ್ಲೇಶ್ವರ, ಸಂಜೆ 6.30

ಕಾಮಣ್ಣನ ಹಬ್ಬದ ಆಚರಣೆ: ರತಿ–ಮನ್ಮಥರ ಉಯ್ಯಾಲೋತ್ಸವ, ಆಯೋಜನೆ ಹಾಗೂ ಸ್ಥಳ: ರಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್, ತೋಟದ ದೇವರ ಗಲ್ಲಿ, ಅರಳೇಪೇಟೆ, ಸಂಜೆ 6.30

‘ಸಡನ್ನಾಗ್ ಸಾಯ್ದೇ ಹೋದ್ರೆ?!’ ನಾಟಕ ಪ್ರದರ್ಶನ: ತಂಡ: ಸೈಡ್ ವಿಂಗ್, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಬಸವನಗುಡಿ, ಸಂಜೆ 7.30

ಅಹೋರಾತ್ರಿ ಸಂಗೀತ ಕಛೇರಿ: ಯೋಗೇಶ್ ಸಂಸಿ, ವಿನಾಯಕ ತೊರವಿ, ರುಚಿರ ಕೇದಾರ್, ಇಂದ್ರಯುದ್ಧ್ ಮಜುಂದಾರ್, ದತ್ತಾತ್ರೇಯ ವೇಲಂಕರ್, ಆಯೋಜನೆ: ಗುರುರಾವ್ ದೇಶಪಾಂಡೆ ಸಂಗೀತ ಸಭಾ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ರಾತ್ರಿ 9 

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.