ADVERTISEMENT

ದಿಢೀರ್ ಏರಿದ ಟೊಮೆಟೊ ದರ

ಆವಕ ಪ್ರಮಾಣದಲ್ಲಿ ಕುಸಿತ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 22:15 IST
Last Updated 1 ಜುಲೈ 2020, 22:15 IST
ಶ್ರೀನಗರದ ತರಕಾರಿ ಅಂಗಡಿಯೊಂದರಲ್ಲಿ ಟೊಮೆಟೊ ಮಾರಾಟ ಭರದಿಂದ ಸಾಗಿತ್ತು -ಪ್ರಜಾವಾಣಿ ಚಿತ್ರ 
ಶ್ರೀನಗರದ ತರಕಾರಿ ಅಂಗಡಿಯೊಂದರಲ್ಲಿ ಟೊಮೆಟೊ ಮಾರಾಟ ಭರದಿಂದ ಸಾಗಿತ್ತು -ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಏರಿಕೆ ಕಂಡಿದೆ. ಎರಡು ತಿಂಗಳವರೆಗೆ ಟೊಮೊಟೊಬೆಲೆ ಹೆಚ್ಚಿರಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಲಾಕ್‍ಡೌನ್ ಹಾಗೂ ಅದರ ಬಳಿಕ ಟೊಮೆಟೊ ಚಿಲ್ಲರೆ ದರ ಪ್ರತಿ ಕೆ.ಜಿ.ಗೆ ₹20ಕ್ಕಿಂತ ದಾಟಿರಲಿಲ್ಲ. ಆದರೆ, ಒಂದು ವಾರದಿಂದ ದಿಢೀರ್ ಏರಿಕೆ ಕಂಡಿರುವ ಟೊಮೊಟೊ ಪ್ರತಿ ಕೆ.ಜಿ.ಗೆ ₹50ರಂತೆ ಬುಧವಾರ ಮಾರಾಟವಾಯಿತು. ಸಿಂಗೇನ ಅಗ್ರಹಾರ ಹಾಗೂ ದಾಸನಪುರ ಎಪಿಎಂಸಿ ಮಾರುಕಟ್ಟೆಗಳಲ್ಲೂ ಟೊಮೊಟೊ ಆವಕ ಪ್ರಮಾಣ ಕಡಿಮೆಯಾಗಿದೆ.

ಕ್ಯಾರೆಟ್, ಬೀಟ್‍ರೂಟ್, ಮೂಲಂಗಿ, ಆಲೂಗಡ್ಡೆ ದರಗಳು ಏರಿವೆ. ಕೊತ್ತಂಬರಿ ಸೊಪ್ಪು ಪ್ರತಿ ಕಟ್ಟಿಗೆ ₹10, ಮೆಂತ್ಯೆ ₹8, ಪಾಲಕ್ ₹10 ರಂತೆ ಮಾರಾಟವಾಗುತ್ತಿದೆ.

ADVERTISEMENT

'8 ತಿಂಗಳಿನಿಂದ ಟೊಮೊಟೊ ದರ ಏರಿಕೆ ಆಗಿರಲಿಲ್ಲ. ಲಾಕ್‍ಡೌನ್ ವೇಳೆ ನೆಲಕಚ್ಚಿದ್ದ ತರಕಾರಿ ದರಗಳಿಂದ ರೈತರು ಟೊಮೊಟೊ ಬೆಳೆಯಲು ಮುಂದಾಗಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಲೂ ತೋಟಗಳಲ್ಲಿ ಬೆಳೆದಿದ್ದ ಟೊಮೊಟೆ ಹಾನಿಗೊಳಗಾಗಿವೆ. ಇದರ ಪರಿಣಾಮ ಮಾರುಕಟ್ಟೆಗಳಿಗೆ ಅಗತ್ಯ ಪ್ರಮಾಣದ ಟೊಮೊಟೊ ಪೂರೈಕೆಯಾಗುತ್ತಿಲ್ಲ. ಇದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿದೆ' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.