ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಎರಡು ದಿನಗಳಲ್ಲಿ ₹50.71 ಲಕ್ಷ ದಂಡ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2023, 22:30 IST
Last Updated 7 ಜುಲೈ 2023, 22:30 IST
ಸಂಚಾರ ನಿಯಂತ್ರಣ ಕೇಂದ್ರ
ಸಂಚಾರ ನಿಯಂತ್ರಣ ಕೇಂದ್ರ   

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದ್ದರಿಂದ, ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳಲ್ಲಿ ₹ 50.71 ಲಕ್ಷ ದಂಡ ಸಂಗ್ರಹವಾಗಿದೆ. 15,980 ಪ್ರಕರಣಗಳು ಇತ್ಯರ್ಥಗೊಂಡಿವೆ.

ರಿಯಾಯಿತಿ ಸೌಲಭ್ಯ ಪಡೆಯಲು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಜನರು ದಂಡ ಪಾವತಿ ಮಾಡುತ್ತಿದ್ದಾರೆ.

‘ಮೊದಲ ದಿನವಾದ ಗುರುವಾರ ₹ 28.35 ಲಕ್ಷ ಹಾಗೂ ಎರಡನೇ ದಿನವಾದ ಶುಕ್ರವಾರ ₹ 22.36 ಲಕ್ಷ ಸಂಗ್ರಹವಾಗಿದೆ. ಸಂಚಾರ ನಿರ್ವಹಣೆ ಕೇಂದ್ರ (ಟಿಎಂಸಿ), ಸಂಚಾರ ಪೊಲೀಸ್ ಠಾಣೆಗಳು, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳು ಹಾಗೂ ಆನ್‌ಲೈನ್‌ ಮೂಲಕ ಜನರು ದಂಡ ಕಟ್ಟುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘2023ರ ಫೆಬ್ರುವರಿ 11ರೊಳಗಿನ ಪ್ರಕರಣಗಳಿಗೆ ರಿಯಾಯಿತಿ ಸೌಲಭ್ಯವಿದ್ದು, ಸೆಪ್ಟೆಂಬರ್ 9ರೊಳಗಾಗಿ ದಂಡ ಪಾವತಿಸಲು ಗಡುವು ವಿಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.