
ರಾಜರಾಜೇಶ್ವರಿನಗರ: ಮುತ್ತರಾಯ ನಗರ ರೈಲ್ವೆ ಗೇಟ್‌ನಿಂದ ಬೈರೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಮರಗಳ ಬುಡಕ್ಕೆ ಬೆಂಕಿ ಹಾಕಲಾಗುತ್ತಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮುತ್ತರಾಯನಗರದಿಂದ ಅರಣ್ಯ ನೌಕರ ಬಡಾವಣೆವರೆಗೆ ಬೆಳೆದಿರುವ ಮರದ ಬುಡಗಳಿಗೆ, ಪ್ಲಾಸ್ಟಿಕ್, ಕಸದ ರಾಶಿಯನ್ನು ತಂದು ಸುರಿದು ಪ್ರತಿನಿತ್ಯ ಬೆಂಕಿ ಹಚ್ಚುವುದರಿಂದ ನಿಧಾನವಾಗಿ ಬೆಂಕಿಯ ಕೆನ್ನಾಲಿಗೆಗೆ ಮರಗಳು ಆಹುತಿಯಾಗುತ್ತಿವೆ.
‘ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಹೆಸರಿಗಷ್ಟೇ ಇದೆ. ಮರಗಳ ರಕ್ಷಣೆ ಮಾಡುತ್ತಿಲ್ಲ. ನಿತ್ಯವೂ ಇಲ್ಲಿ ಮರಗಳು ನಾಶವಾಗುತ್ತಿವೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
‘ಮರಗಳನ್ನು ನಾಶ ಮಾಡಲು ಬುಡಕ್ಕೆ ಆ್ಯಸಿಡ್ ಹಾಕುವುದು, ಬೆಂಕಿ ಹಚ್ಚುವುದು, ಮರಗಳನ್ನು ಕಡಿಯುವು
ದನ್ನು ಮಾಡುತ್ತಿದ್ದಾರೆ. ದೂರು ನೀಡಿದರೂ ನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ನಿವಾಸಿಗಳಾದ ರಾಜೇಶ್ ಮತ್ತು ಅನಿಲ್ ದೂರಿದರು.
ವಲಯ ಅರಣ್ಯ ಅಧಿಕಾರಿ ಜಗದೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಸ್ಪಂದಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.