ADVERTISEMENT

ಬೆಂಗಳೂರಿನಲ್ಲಿ ₹84 ಲಕ್ಷ‌ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 7:26 IST
Last Updated 14 ಏಪ್ರಿಲ್ 2021, 7:26 IST
ಹೊರ ರಾಜ್ಯದಿಂದ ಗಾಂಜಾ ತರಿಸಿಕೊಂಡು‌ ನಗರದ ವಿವಿಧೆಡೆ ಮಾರಾಟ‌
ಹೊರ ರಾಜ್ಯದಿಂದ ಗಾಂಜಾ ತರಿಸಿಕೊಂಡು‌ ನಗರದ ವಿವಿಧೆಡೆ ಮಾರಾಟ‌   

ಬೆಂಗಳೂರು: ಹೊರ ರಾಜ್ಯದಿಂದ ಗಾಂಜಾ ತರಿಸಿಕೊಂಡು‌ ನಗರದ ವಿವಿಧೆಡೆ ಮಾರಾಟ‌ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣದ ಚಡ್ಡ ಕೃಷ್ಣನ್ (22) ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮೂರ್ತಿ (40) ಬಂಧಿತ ಆರೋಪಿಗಳು.

'ಕೋರಮಂಗಲದ ಬಳ್ಳಾರಿ ಕಾಲೊನಿ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಂದಿದ್ದರು. ಈ ಮಾಹಿತಿ ಆಧರಿಸಿ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಲಾಯಿತು' ಎಂದು ಪೊಲೀಸರು ತಿಳಿಸಿದರು.

ADVERTISEMENT

'ಆರೋಪಿಗಳಿಂದ ₹84.60 ಲಕ್ಷ ಮೌಲ್ಯದ 141 ಕೆ.ಜಿ ಗಾಂಜಾ, ತೂಕದ ಯಂತ್ರ, ಒಂದು ವಾಹನ, ₹4 ಸಾವಿರ ನಗದು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ'‌ ಎಂದು ಮಾಹಿತಿ ನೀಡಿದರು.

'ಆರೋಪಿಗಳು ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಅರಕು ಗುಡ್ಡಗಾಡು ಪ್ರದೇಶದ ಆದಿವಾಸಿಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದರು. ಅದನ್ನು ರಾಜ್ಯಕ್ಕೆ ತಂದು ಕೋರಮಂಗಲ, ಎಚ್.ಎಸ್.ಆರ್.ಬಡಾವಣೆ, ಕೆ.ಆರ್.ಪುರ, ಕೆ.ಆರ್.ಪೇಟೆ ಸೇರಿದಂತೆ ಹಲವೆಡೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.