ADVERTISEMENT

UPSC Results: ‘ಇನ್‌ಸೈಟ್ಸ್‌ ಐಎಎಸ್‌’ಗೆ ಅತ್ಯುತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:25 IST
Last Updated 24 ಸೆಪ್ಟೆಂಬರ್ 2021, 22:25 IST
   

ಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವೆಗಳ ಪರೀಕ್ಷೆಗೆ ತರಬೇತಿ ನೀಡುವ ಪ್ರಮುಖ ಸಂಸ್ಥೆ ‘ಇನ್‌ಸೈಟ್ಸ್‌ ಐಎಎಸ್‌’ಗೆ ಈ ಬಾರಿಯೂ ಅತ್ಯುತ್ತಮ ಫಲಿತಾಂಶ ದೊರೆತಿದೆ.

2020ನೇ ಸಾಲಿನ ಪರೀಕ್ಷೆಯಲ್ಲಿನ ಮೊದಲ 100ರಲ್ಲಿನ 40 ರ‍್ಯಾಂಕ್‌ಗಳು ‘ಇನ್‌ಸೈಟ್ಸ್‌ ಐಎಎಸ್‌’ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಪಾಲಾಗಿವೆ. ಮೊದಲ 10ರಲ್ಲಿನ 4 ರ‍್ಯಾಂಕ್‌ಗಳು ಸಹ ಕೇಂದ್ರಕ್ಕೆ ದೊರೆತಿವೆ. ಒಟ್ಟಾರೆ, 210 ರ‍್ಯಾಂಕ್‌ಗಳನ್ನು ಕೇಂದ್ರದ ಅಭ್ಯರ್ಥಿಗಳು ಪಡೆದಿದ್ದಾರೆ. ಹಿಂದಿನ ವರ್ಷ 170 ರ‍್ಯಾಂಕ್‌ಗಳನ್ನು ಇಲ್ಲಿನ ಅಭ್ಯರ್ಥಿಗಳು ಪಡೆದಿದ್ದರು.

ಚಂದ್ರಾಲೇಔಟ್‌ನಲ್ಲಿ ಈ ಸಂಸ್ಥೆ ಇದೆ. ಇಲ್ಲಿ ತರಬೇತಿ ಪಡೆದ ಕರ್ನಾಟಕದ 22 ಅಭ್ಯರ್ಥಿಗಳು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಅಕ್ಷಯ್‌ ಸಿಂಹ ಅವರು 77ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರಿಗೆ ಸಂಸ್ಥೆಯ ಸಂಸ್ಥಾಪಕ ವಿನಯಕುಮಾರ್‌ ಅವರು ಮಾರ್ಗದರ್ಶನ ನೀಡಿದ್ದರು. ಯತೀಶ್‌ 115ನೇ ರ‍್ಯಾಂಕ್‌, ಪ್ರಿಯಾಂಕಾ 121ನೇ ರ‍್ಯಾಂಕ್‌, ನಿಶ್ಚಯ ಪ್ರಸಾದ್‌ 130, ಶ್ರೀನಿವಾಸ್‌ ಎಂ.ಪಿ.235ನೇ ರ‍್ಯಾಂಕ್‌ ಪಡೆದಿದ್ದಾರೆ.

ಅನಿರುದ್ಧ ಆರ್‌. ಗಂಗಾವರಂ (252), ಸುರಜ್‌ ಡಿ (255), ನೇತ್ರಾ ಮೇಟಿ (326), ಮೇಘಾ ಜೈನ್‌ (354), ಪ್ರಜ್ವಲ್‌ (367), ಸಾಗರ್‌ ಎ.ವಾಡಿ (385), ನಾಗರಗೋಜೆ ಶುಭಂ ಬಾಬುಸಾಹೇಬ್‌ (453), ಮಾಲಾಶ್ರೀ ಎಂ.ವಿ. (504), ಶಾಕೀರಅಹ್ಮದ ಎ ತೊಂಡಿಖಾನ (583), ಪ್ರಮೋದ್‌ ಆರಾಧ್ಯ (601), ಕೆ. ಧರ್ಮವೀರ ಚೌಹಾಣ್‌ (657), ಮಮತಾ ಜಿ (707), ಅಭಿಷೇಕ್‌ ಬಿ.ಎನ್‌.(708), ಕೆ. ಸೌರಭ್‌ (725), ಎಚ್‌. ಸಂತೋಷ (751) ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.