ADVERTISEMENT

ಬೆಂಗಳೂರು: ವಾಗ್ದೇವಿ ಶಾಲೆಯಲ್ಲಿ ಪುಟಾಣಿ ಪ್ರಪಂಚ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 14:28 IST
Last Updated 23 ಫೆಬ್ರುವರಿ 2026, 14:28 IST
ಮಾರತ್‌ಹಳ್ಳಿಯ ವಾಗ್ದೇವಿ ಶಾಲೆಯಲ್ಲಿ ನಡೆದ ಪುಟಾಣಿ ಪ್ರಪಂಚ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು.
ಮಾರತ್‌ಹಳ್ಳಿಯ ವಾಗ್ದೇವಿ ಶಾಲೆಯಲ್ಲಿ ನಡೆದ ಪುಟಾಣಿ ಪ್ರಪಂಚ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು.   

ಬೆಂಗಳೂರು: ಮಾರತ್‌ಹಳ್ಳಿಯ ವಾಗ್ದೇವಿ ವಿಲಾಸ ಸೂಪರ್ ಶಾಲೆಯಲ್ಲಿ ‘ಪುಟಾಣಿ ಪ್ರಪಂಚ’ ಮಕ್ಕಳ ಉತ್ಸವವನ್ನು ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

‌ಶಿಕ್ಷಣದ ಜತೆಗೆ ಸಾಂಸ್ಕೃತಿಕ ಮೌಲ್ಯಗಳು ಹಾಗೂ ದೇಶಭಕ್ತಿಯ ಭಾವನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಸ್ಪಂದನೆ ದೊರಕಿತು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮೇಜರ್ ಜನರಲ್ ಜಿ.ಡಿ.ಭಕ್ಷಿ ಅವರು, ತಮ್ಮ ಸೇವಾವಧಿಯಲ್ಲಿ ನಡೆದ ಯುದ್ಧ, ಹೋರಾಟಗಳ ನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ADVERTISEMENT

‘ದೇಶಪ್ರೇಮ ಎಂದರೆ ಕೇವಲ ಮಾತಲ್ಲ. ಅದು ಜೀವನ ಮೌಲ್ಯವಾಗಬೇಕು. ದೇಶಭಕ್ತಿಯನ್ನು ಎಂದಿಗೂ ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ರೂಪಿಸಿದ ಶ್ರೀಕೃಷ್ಣ ಹಾಗೂ ಮೇಜರ್ ಜನರಲ್ ಭಕ್ಷಿ ಅವರ ಸುಂದರ ಮರಳು ಶಿಲ್ಪ ಮನಸೂರೆಗೊಂಡವು.

ವಾಗ್ದೇವಿ ವಿಲಾಸ ಸಂಸ್ಥೆಯ ಅಧ್ಯಕ್ಷ ಕೆ ಹರೀಶ್, ಸಿಇಒ ಶ್ಯಾಲೆಟ್, ಪ್ರಾಂಶುಪಾಲರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.