ADVERTISEMENT

ಬೆಂಗಳೂರು: ‘ವೀರಲೋಕ ಬುಕ್ ಬಾಕ್ಸ್’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:04 IST
Last Updated 4 ಸೆಪ್ಟೆಂಬರ್ 2025, 23:04 IST
‘ವೀರಲೋಕ ಬುಕ್‌ ಪ್ಯಾಕ್‌’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.
‘ವೀರಲೋಕ ಬುಕ್‌ ಪ್ಯಾಕ್‌’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.   

ಬೆಂಗಳೂರು: ಉಡುಗೊರೆ ನೀಡಲು ಅನುಕೂಲವಾಗುವಂತೆ ಪುಸ್ತಕಗಳನ್ನು ಪ್ಯಾಕ್ ಮಾಡಿ ನೀಡುವ ‘ವೀರಲೋಕ ಬುಕ್‌ ಪ್ಯಾಕ್‌’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.

ವೀರಲೋಕ ಪ್ರಕಾಶನವು ₹10 ಲಕ್ಷ ಹೂಡಿಕೆ ಮಾಡಿ ಒಂದೂವರೆ ವರ್ಷದಲ್ಲಿ ಈ ಯೋಜನೆಯನ್ನು ಸಿದ್ಧಗೊಳಿಸಿದೆ. ಬಟ್ಟೆ, ಡ್ರೈ ಫ್ರೂಟ್ಸ್, ಮೊಬೈಲ್, ಸ್ವೀಟ್ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಲು ತರಹೇವಾರಿ ಉಡುಗೊರೆ ಬಾಕ್ಸ್ ಗಳಿವೆ. ಆದರೆ ಪುಸ್ತಕಗಳಿಗಾಗಿ ಇದುವರೆಗೂ ಯಾವುದೇ ಉಡುಗೊರೆ ಬಾಕ್ಸ್ ಇರಲಿಲ್ಲ. ಆದರೆ ಈಗ ಅದು ಸಾಧ್ಯವಾಗಿದೆ ಎಂದು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ.

ಮ್ಯಾಚ್ ಬಾಕ್ಸ್, ತಿಜೋರಿ ಪೆಟ್ಟಿಗೆ, ಮ್ಯಾಗ್ನೆಟಿಕ್ ಬಾಕ್ಸ್, ಬಟರ್ ಫ್ಲೈ ಬಾಕ್ಸ್ ಸೇರಿದಂತೆ ಹತ್ತು ವಿವಿಧ ವಿನ್ಯಾಸಗಳ ಬಾಕ್ಸ್‌ ಲಭ್ಯವಿವೆ. www.veeralokabooks.com ಮೂಲಕ ಪುಸ್ತಕಗಳನ್ನು ಆರ್ಡರ್ ಮಾಡಬಹುದು. ಮೊಬೈಲ್‌: 7022122121, 8861212172 ಮೂಲಕವೂ ಉಡುಗೊರೆ ಬಾಕ್ಸ್ ತರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.