ಬೆಂಗಳೂರು: ತಾಯಿ, ಮಗಳು ಸ್ನಾನ ಮಾಡುವ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪದ ಮೇರೆಗೆ ಆರೋಪಿಯೊಬ್ಬನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕೇರಳ ಮೂಲದ, ಚೆನ್ನಸಂದ್ರ ನಿವಾಸಿ ಮೊಯಿನುದ್ದೀನ್ (24) ಬಂಧಿತ ಆರೋಪಿ. ಆರೋಪಿಯು ಬಾತ್ ರೂಮ್‌ನ ಕಿಟಕಿಯಿಂದ ಮೊಬೈಲ್ ಫೋನ್‌ನಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರ ಮನೆಯ ಸಮೀಪದಲ್ಲೇ ವಾಸವಿರುವ ಆರೋಪಿ, ಜುಲೈ 8ರ ಬೆಳಗ್ಗೆ ಕೃತ್ಯ ಎಸಗುತ್ತಿರುವುದನ್ನು ಬಾಲಕಿ ಗಮನಿಸಿ, ತಾಯಿಗೆ ಹೇಳಿದ್ದಳು. ಬಾಲಕಿ ತಂದೆ ಹೊರಗೆ ಬಂದು ನೋಡುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ.
ಆರೋಪಿ ಕಾಡುಗೋಡಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಆತನ ಮೊಬೈಲ್ ಫೋನ್‌ನಲ್ಲಿದ್ದ ವಿಡಿಯೊ ಅಳಿಸಿ ಹಾಕಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.