ADVERTISEMENT

ವಿ.ವಿ. ಪುರ ಒಳಾಂಗಣ ಕ್ರಿಡಾಂಗಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 17:10 IST
Last Updated 26 ಆಗಸ್ಟ್ 2020, 17:10 IST
ವಿ.ವಿ.ಪುರದ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಉದಯ್‌ ಗರುಡಾಚಾರ್‌, ಮೇಯರ್ ಎಂ.ಗೌತಮ್‌ ಕುಮಾರ್‌, ಪಾಲಿಕೆ ಸದಸ್ಯೆ ವಾಣಿ ರಾವ್‌ ಹಾಗೂ ವಸತಿ ಸಚಿವ ವಿ.ಸೋಮಣ್ಣ ಷಟಲ್‌ ಬ್ಯಾಡ್ಮಿಂಟನ್‌ ಆಡಿದರು.
ವಿ.ವಿ.ಪುರದ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಉದಯ್‌ ಗರುಡಾಚಾರ್‌, ಮೇಯರ್ ಎಂ.ಗೌತಮ್‌ ಕುಮಾರ್‌, ಪಾಲಿಕೆ ಸದಸ್ಯೆ ವಾಣಿ ರಾವ್‌ ಹಾಗೂ ವಸತಿ ಸಚಿವ ವಿ.ಸೋಮಣ್ಣ ಷಟಲ್‌ ಬ್ಯಾಡ್ಮಿಂಟನ್‌ ಆಡಿದರು.   

ಬೆಂಗಳೂರು: ಬಿಬಿಎಂಪಿಯು ವಿಶ್ವೇಶ್ವರಪುರ ವಾರ್ಡ್‌ನ ಚಿಕ್ಕಮಾವಳ್ಳಿಯಲ್ಲಿ ಕೃಂಬಿಗಲ್‍ ರಸ್ತೆಯ ಬಳಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಉದ್ಘಾಟಿಸಿದರು.

ಬಿಬಿಎಂಪಿಯು ₹ 1.35 ಕೋಟಿ ವೆಚ್ಚದಲ್ಲಿ ಈ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿದೆ. ಒಟ್ಟು 4,800 ಚದರ ಅಡಿ ವಿಸ್ತೀರ್ಣದ ಈ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಯೋಗ ಕೇಂದ್ರಗಳಿವೆ.

ಲೆಗಸಿ ಸ್ಪೋರ್ಟ್ಸ್‌ ಅಕಾಡೆಮಿಗೆ ಈ ಕ್ರೀಡಾಂಗಣ ನಿರ್ವಹಣೆಯ ಉಸ್ತುವಾರಿಯನ್ನು ಬಿಬಿಎಂಪಿ ವಹಿಸಿದೆ. ತಿಂಗಳಿಗೆ ₹ 30 ಸಾವಿರ ಬಾಡಿಗೆ ಆಧಾರದ ಮೇಲೆ 5 ವರ್ಷಗಳ ಅವಧಿಗೆ ಈ ಸಂಸ್ಥೆಯು ಕ್ರೀಡಾಂಗಣವನ್ನು ನೋಡಿಕೊಳ್ಳಲಿದೆ. ಈ ಕ್ರೀಡಾಂಗಣದ ನಿರ್ವಹಣಾ ದೃಷ್ಟಿಯಿಂದ ಇದನ್ನು ಬಳಸುವ ಪ್ರತಿ ಆಟಗಾರರಿಂದ 2,500 ಠೇವಣಿ ಹಾಗೂ ತಿಂಗಳಿಗೆ ₹ 500 ಸಂಗ್ರಹಿಸಲು ಅನುಮತಿ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.