ADVERTISEMENT

ಬೆಂಗಳೂರು | ಕ್ಯಾನ್ಸರ್ ವಿರುದ್ಧ ನಡೆಯಿರಿ: ವಾಕಥಾನ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 15:52 IST
Last Updated 2 ಫೆಬ್ರುವರಿ 2025, 15:52 IST
ವಿಶ್ವ ಕ್ಯಾನ್ಸರ್‌ ನಿಯಂತ್ರಣ ದಿನಾಚರಣೆಯ ಪ್ರಯುಕ್ತ ‘ಅದ್ವೈಕಾ ಕೇರ್‌ ಫೌಂಡೇಶನ್‌ ವತಿಯಿಂದ ಭಾನುವಾರ ನಡೆದ ‘ಕ್ಯಾನ್ಸರ್‌ ವಿರುದ್ಧ ನಡೆಯಿರಿ’ ವಾಕಥಾನ್‌ನಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ವಿಶ್ವ ಕ್ಯಾನ್ಸರ್‌ ನಿಯಂತ್ರಣ ದಿನಾಚರಣೆಯ ಪ್ರಯುಕ್ತ ‘ಅದ್ವೈಕಾ ಕೇರ್‌ ಫೌಂಡೇಶನ್‌ ವತಿಯಿಂದ ಭಾನುವಾರ ನಡೆದ ‘ಕ್ಯಾನ್ಸರ್‌ ವಿರುದ್ಧ ನಡೆಯಿರಿ’ ವಾಕಥಾನ್‌ನಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು   

ಬೆಂಗಳೂರು: ವಿಶ್ವ ಕ್ಯಾನ್ಸರ್‌ ನಿಯಂತ್ರಣ ದಿನಾಚರಣೆಯ ಪ್ರಯುಕ್ತ ‘ಅದ್ವೈಕಾ ಕೇರ್‌ ಫೌಂಡೇಶನ್‌’ ವತಿಯಿಂದ ‘ಕ್ಯಾನ್ಸರ್‌ ವಿರುದ್ಧ ನಡೆಯಿರಿ’ ವಾಕಥಾನ್‌ ಭಾನುವಾರ ನಡೆಯಿತು.

ವಿಧಾನ ಸೌಧ ಮುಂಭಾಗದಲ್ಲಿ ವಾಕಥಾನ್‌ ಆರಂಭಗೊಂಡಿತು. ಕೆ.ಆರ್. ಸರ್ಕಲ್, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಕಸ್ತೂರ ಬಾ ರಸ್ತೆ ಮೂಲಕ ಸಾಗಿ ಬಾಲಭವನದಲ್ಲಿ ಕೊನೆಗೊಂಡಿತು.

ವಾಕಥಾನ್‌ಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ ಸುಧೀಂದ್ರ ಚಾಲನೆ ನೀಡಿ ಮಾತನಾಡಿ, ‘ದೇಶದಲ್ಲಿ ಅತಿಹೆಚ್ಚು ಬಲಿ ಪಡೆಯುತ್ತಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಎರಡನೇ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಹೆಮ್ಮಾರಿಯನ್ನು ನಿಯಂತ್ರಿಸಲು ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.

ADVERTISEMENT

ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ ಚಿಲಕೂರಿ, ಅದ್ವೈಕಾ ಕೇರ್ ಫೌಂಡೇಶನ್ ಸಿಇಒ ರಾಕಶ್ರೀ ವಾರಿಯರ್, ಟ್ರಸ್ಟಿಗಳಾದ ಬಾಲಾ ವಾರಿಯರ್, ಎಲ್‌ಎನ್‌ಸಿಎಚ್ ಕೃಷ್ಣವಂಶಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.