ADVERTISEMENT

ರಷ್ಯಾ ಮೇಲೆ ಹೊಸ ನಿರ್ಬಂಧ ಹೇರಲು ಸಜ್ಜಾದ ಜಿ–7 ರಾಷ್ಟ್ರಗಳು

ರಾಯಿಟರ್ಸ್
Published 24 ಫೆಬ್ರುವರಿ 2023, 19:30 IST
Last Updated 24 ಫೆಬ್ರುವರಿ 2023, 19:30 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌   

ಬೆಂಗಳೂರು: ಉಕ್ರೇನ್ ಮೇಲಿನ ಆಕ್ರಮಣಕ್ಕೆ ವರ್ಷ ತುಂಬಿದ ಬೆನ್ನಲ್ಲೇ ರಷ್ಯಾ ಗುರಿಯಾಗಿಸಿಕೊಂಡು ಮತ್ತಷ್ಟು ದೂರಗಾಮಿ ಮತ್ತು ಹೊಸ ನಿರ್ಬಂಧಗಳನ್ನು ಹೇರಲು ಜಿ–7 ರಾಷ್ಟ್ರಗಳು ಸಿದ್ಧತೆ ಮಾಡಿಕೊಂಡಿವೆ.

ರಷ್ಯಾದ ಯುದ್ಧಕ್ಕೆ ನೆರವು ನೀಡುವ ಇತರ ದೇಶಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಯೂ ಪ್ರಮುಖ ಆರ್ಥಿಕ ಕ್ಷೇತ್ರಗಳಿಗೆ ಪೆಟ್ಟು ನೀಡಲು ಹೊಸ ನಿರ್ಬಂಧಗಳನ್ನು ಹೆಣೆದಿವೆ.

ಆಕ್ರಮಣದ ವಾರ್ಷಿಕೋತ್ಸವ ನಿಮಿತ್ತ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ವರ್ಚುವಲ್‌ ಮೂಲಕ ಭೇಟಿಯಾಗಲಿರುವ ಸಿರಿವಂತ ರಾಷ್ಟ್ರಗಳ ಗುಂಪಿನ ನಾಯಕರು ಹೊಸ ನಿರ್ಬಂಧಗಳ ಪ್ಯಾಕೇಜ್‌ ಘೋಷಿಸುವ ನಿರೀಕ್ಷೆ ಇದೆ.

ADVERTISEMENT

ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಜಿ 7 ರಾಷ್ಟ್ರಗಳ ಅಧ್ಯಕ್ಷ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಷಿದಾ ಅವರು ‘ರಷ್ಯಾ ತನ್ನ ಕಠಿಣ ನಿಲುವು ಬದಲಾಯಿಸಲು ನಿರಾಕರಿಸುತ್ತಿದೆ. ರಷ್ಯಾದ ವಿರುದ್ಧ ಹೊಸ ನಿರ್ಬಂಧಗಳನ್ನು ಒಟ್ಟಿಗೆ ಹೇರುತ್ತೇವೆ. ನಮ್ಮ ಒಗ್ಗಟ್ಟು ತೋರಿಸುತ್ತೇವೆ’ ಎಂದು ಹೇಳಿದರು.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ 20 ರಾಷ್ಟ್ರಗಳ ಸಭೆಯಲ್ಲೂ ಜಿ 7 ರಾಷ್ಟ್ರಗಳ ಹಣಕಾಸು ಸಚಿವರು, ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುವಂತೆ ಮತ್ತು ಯುದ್ಧಪೀಡಿತ ಉಕ್ರೇನ್‌ಗೆ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.