ADVERTISEMENT

ಸಾಂಬ್ರಾಣಿ ಹೊಗೆ ಸೇವನೆ: ಅಸ್ವಸ್ಥ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2019, 1:16 IST
Last Updated 21 ಮೇ 2019, 1:16 IST
   

ಬೆಂಗಳೂರು: ಸಾಂಬ್ರಾಣಿ ಹೊಗೆ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟರು.

ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ರತ್ನ ಎಂಬ ಮಹಿಳೆಯನ್ನು ಮೇ 8ರಂದು ನಗರದ ಪೀಪಲ್‌ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದ ಕಾರಣಸಿಪಿಆರ್ ಚಿಕಿತ್ಸೆ ನೀಡಿ, ಆಕೆಯನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗಿತ್ತು.

‘ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಕೆಯ ಸ್ಥಿತಿ ಗಂಭೀರವಾಗಿತ್ತು. ಜೀವರಕ್ಷಕಗಳನ್ನು ಅಳವಡಿಸಿ, ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸಿದೆವು. ದೇಹಕ್ಕೆ ಆಮ್ಲಜನಕ ಪೂರೈಕೆಯಾಗದ್ದರಿಂದಮೆದುಳಿಗೆ ಹಾನಿಯಾಯಿತು’ ಎಂದು ಪೀಪಲ್‌ ಟ್ರೀ ಆಸ್ಪತ್ರೆಯ ವೈದ್ಯ ಕೆ.ಮೋಹನ್‌ ತಿಳಿಸಿದರು.

ADVERTISEMENT

‘ಸಾಂಬ್ರಾಣಿಯನ್ನು ಬಳಸುವುದು ಸಾಮಾನ್ಯ. ಆದರೆ, ಕಡಿಮೆ ಪ್ರಮಾಣದಲ್ಲಿ ಬಳಸಿದರೆ ತೊಂದರೆಯಾಗುವುದಿಲ್ಲ. ಸಾಂಬ್ರಾಣಿಯ ದಟ್ಟ ಹೊಗೆ ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ’ ಎಂದು ಹೇಳಿದರು.

‘ಮನೆ ತುಂಬಾ ಇಕ್ಕಟ್ಟಾಗಿದೆ. ಸಾಂಬ್ರಾಣಿ ಹೊಗೆ ದಟ್ಟವಾಗಿ ಆವರಿಸಿದ ಕೊಠಡಿಯನ್ನು ರತ್ನ ಪ್ರವೇಶಿಸಿದ್ದಳು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.