ADVERTISEMENT

ಅಪರಿಚಿತ ಜಾಗಕ್ಕೆ ಕರೆದೊಯ್ಯುವ ಯತ್ನ; ಚಲಿಸುವ ಆಟೊದಿಂದ ಜಿಗಿದು ಪಾರಾದ ಮಹಿಳೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 9:41 IST
Last Updated 3 ಜನವರಿ 2025, 9:41 IST
<div class="paragraphs"><p>ಆಟೊ, ಪ್ರಾತಿನಿಧಿಕ ಚಿತ್ರ</p></div>

ಆಟೊ, ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಬುಕ್ ಮಾಡಿದ್ದ ಜಾಗದ ಬದಲು ಆಟೊ ಚಾಲಕನೊಬ್ಬ ತಪ್ಪಾದ ಜಾಗಕ್ಕೆ ಮಹಿಳೆಯನ್ನು ಕರೆದೊಯ್ಯಲು ಯತ್ನಿಸಿದ್ದು, ಭಯಗೊಂಡ ಮಹಿಳೆ ಚಲಿಸುತ್ತಿದ್ದ ಆಟೊದಿಂದ ಜಿಗಿದು ಬಚಾವಾದ ಘಟನೆ ನಡೆದಿದೆ. ಹೆಬ್ಬಾಳದ ವೀರಣ್ಣಪಾಳ್ಯ ಬಳಿ ಗುರುವಾರ ರಾತ್ರಿ ನಡೆದಿದೆ.

ಕೆಎ 03 ಎಎಂ 89566 ನೋಂದಣಿಯ ಆಟೊ ಚಾಲಕ ಈ ಕೃತ್ಯ ಎಸಗಿದ್ದಾನೆ‌ ಎಂದು ಮಹಿಳೆ ಪತಿ ಎಕ್ಸ್ ಮಾಡಿದ್ದಾರೆ.

ADVERTISEMENT

ಮಹಿಳೆ ಹೊರಮಾವಿನಿಂದ ಥಣಿಸಂದ್ರಕ್ಕೆ ತೆರಳಲು 'ನಮ್ಮ ಯಾತ್ರಿ' ಆ್ಯಪ್‌‌ನಲ್ಲಿ ಆಟೊ ಬುಕ್ ಮಾಡಿದ್ದರು. ಚಾಲಕ ಮಹಿಳೆಯನ್ನು ತಪ್ಪಾದ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದ. ಆಟೊ ನಿಲ್ಲಿಸಿ ಎಂದು ಕೂಗಾಡಿದರೂ ಆಟೊ ಚಾಲಕ ನಿಲ್ಲಿಸಲಿಲ್ಲ. ಚಾಲಕನ ವರ್ತನೆಯಿಂದ ಭಯಗೊಂಡು ಚಲಿಸುತ್ತಿದ್ದ ಆಟೊದಿಂದ ಜಿಗಿದು ಮನೆಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.