ADVERTISEMENT

ಬೀದರ್: ದತ್ತಗಿರಿ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 15:40 IST
Last Updated 16 ಜುಲೈ 2020, 15:40 IST
ಪ್ರೇರಣಾ ಬಸವರಾಜ
ಪ್ರೇರಣಾ ಬಸವರಾಜ   

ಬೀದರ್: ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿಯ ಶ್ರೀ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.

ಪರೀಕ್ಷೆ ಬರೆದ ಎಲ್ಲ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ವಿದ್ಯಾರ್ಥಿಗಳು ಅಗ್ರಶ್ರೇಣಿ, 35 ಪ್ರಥಮ ದರ್ಜೆ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಪ್ರೇರಣಾ ಬಸವರಾಜ ಶೇ 95.2, ಸಹನಾ ರಾಜಕುಮಾರ ಶೇ 92.6, ಪ್ರಜ್ವಲ್ ವೆಂಕಟೇಶ ಶೇ 87.8, ಭವಾನಿ ಬಸವರಾಜ ಶೇ 87.4, ಮಹೇಶ ಸೋಮನಾಥ ಶೇ 87.4, ಸುದೀಕ್ಷಿತ್ ಸತೀಶ ಶೇ 86.8, ಕೃಷ್ಣವೇಣಿ ಮೋಹನ ರೆಡ್ಡಿ ಶೇ 86.4, ರಾಣಿ ವೆಂಕಟೇಶ ಶೇ 86, ಶಕುಂತಲಾ ಖೂಬಾಜಿ ಶೇ 85.6 ಹಾಗೂ ವಿನೀತ ನೀಲಕಂಠಯ್ಯ ಶೇ 85 ಅಂಕ ಗಳಿಸಿ ಸಾಧನೆ ತೋರಿದ್ದಾರೆ ಎಂದು ಪ್ರಾಚಾರ್ಯೆ ಮಹಾದೇವಿ ಬೀದೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.