ADVERTISEMENT

ಬೀದರ್: ಕರ್ನಾಟಕ ಫಾರ್ಮಸಿ ಕಾಲೇಜಿಗೆ 3 ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 4:19 IST
Last Updated 28 ಜನವರಿ 2022, 4:19 IST

ಬೀದರ್: ಇಲ್ಲಿಯ ಕರ್ನಾಟಕ ಫಾರ್ಮಸಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಕಳೆದ ನವೆಂಬರ್‌ನಲ್ಲಿ ನಡೆದ ಬಿ. ಫಾರ್ಮಸಿ 8ನೇ ಸೆಮಿಸ್ಟರ್ಪರೀಕ್ಷೆಯಲ್ಲಿ ಅಕ್ಷತಾ 13ನೇ ರ‍್ಯಾಂಕ್, ಎಂ. ಫಾರ್ಮಸಿ (ಕ್ಯೂ.ಎ) ಎರಡನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಯೇರೋಳೆ ವಿಕಾಸ 16ನೇ ರ‍್ಯಾಂಕ್ ಹಾಗೂ ಪಲ್ಲವಿ 21ನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಡಾ. ಕ್ರಾಂತಿಕುಮಾರ ಸಿರ್ಸೆತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT