ADVERTISEMENT

ವಿಧಾನಸಭೆ ಚುನಾವಣೆಗೆ ‘ಆಪ್’ ತಯಾರಿ

ಶಾಸಕರು, ಪ್ರಭಾವಿಗಳು ಪಕ್ಷದ ಸಂಪರ್ಕದಲ್ಲಿ: ವಿಜಯ ಶರ್ಮಾ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 16:09 IST
Last Updated 14 ಜೂನ್ 2022, 16:09 IST
ಬೀದರ್‌ನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅನೇಕರು ಪಕ್ಷಕ್ಕೆ ಸೇರಿದರು
ಬೀದರ್‌ನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅನೇಕರು ಪಕ್ಷಕ್ಕೆ ಸೇರಿದರು   

ಬೀದರ್: ‘ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಈಗಿನಿಂದಲೇ ತಯಾರಿ ನಡೆಸಿದೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯ ಶರ್ಮಾ ತಿಳಿಸಿದರು.

ಇಲ್ಲಿಯ ಅಬುಲ್ ಫೈಜ್ ದರ್ಗಾ ಬಳಿಯ ಎಸ್.ಕೆ. ಫಂಕ್ಷನ್ ಹಾಲ್‍ನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶಾಸಕರು, ಮಾಜಿ ಶಾಸಕರು, ಉದ್ಯಮಿಗಳು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ಪಕ್ಷದ ಸಂಪರ್ಕದಲ್ಲಿದ್ದಾರೆ. ಅನೇಕರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಪಂಜಾಬ್‍ನಲ್ಲಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಮತ್ತೆ ಸಂಚಲನವಾಗಿದೆ. ಎಲ್ಲರ ದೃಷ್ಟಿ ಆಪ್ ಮೇಲೆ ನೆಟ್ಟಿದೆ. ಕರ್ನಾಟಕದಲ್ಲೂ ಪಕ್ಷ ಶರವೇಗದಲ್ಲಿ ಬೆಳೆಯುತ್ತಿದೆ ಎಂದು ಹೇಳಿದರು.

ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ನೀಡುತ್ತಿರುವ ಆಡಳಿತ ದೇಶಕ್ಕೆ ಮಾದರಿಯಾಗಿದೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು.

ಪಕ್ಷದ ಸಾಮಾಜಿಕ ಜಾಲತಾಣ ಉಸ್ತುವಾರಿ ಶ್ರೀಧರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಮಾಲಗಾರ, ಉಪಾಧ್ಯಕ್ಷರಾದ ಸೈಯದ್ ಜಮೀಲ್, ರಮೇಶ ಪಾಸ್ವಾನ್, ಪ್ರಧಾನ ಕಾರ್ಯದರ್ಶಿ ಅವಿನಾಶ ಕಪಲಾಪುರೆ, ಸಂಘಟನಾ ಮುಖ್ಯಸ್ಥ ಕೈಲಾಶ ಧೂಪೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಗುಲಾಂ ಅಲಿ, ಬೀದರ್ ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಫುಲಾರಿ, ಪ್ರಮುಖರಾದ ತುಕಾರಾಮ ಹಜಾರೆ, ಎಸ್.ಎಸ್. ಮುಬಿನ್, ಸಂದೀಪ್ ಪಾಟೀಲ, ಶಿವರಾಜ ಕೋರೆ, ಷರೀಫ್ ಬಗದಲ್, ಮಹೀಂದ್ರ ಕಾಂಬಳೆ, ಬಬಲು ಎಸ್, ವಿಜಯಲಕ್ಷ್ಮಿ, ದಿನೇಶ್ ಗುಪ್ತಾ, ಭಾಗ್ಯಶ್ರೀ, ಬೀದರ್ ನಗರ ಎಸ್‍ಸಿ ಘಟಕದ ಅಧ್ಯಕ್ಷ ಕಂಟೆಪ್ಪ ಗುಪ್ತಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಗುಲಾಂ ಖಾಲೇದ್, ಆಟೊ ಚಾಲಕರ ಘಟಕದ ಅಧ್ಯಕ್ಷ ಜಗನ್ನಾಥ, ಭೋವಿ ಸಮಾಜದ ಅಧ್ಯಕ್ಷ ಪುಂಡಲೀಕ, ಇತರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವನಾಥ ಕುಂಬಾರ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಮುಸ್ತಫಾ, ರಫಿಕ್, ವಿದ್ಯಾಸಾಗರ ಹಾಗೂ ವಿನೋದ ಬಚ್ಚಾ ಇದ್ದರು.

ಮಹಿಳೆಯರು ಸೇರಿದಂತೆ ನೂರಾರು ಜನ ಪಕ್ಷಕ್ಕೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.