ADVERTISEMENT

ಔರಾದ್: 40 ನಾಟಿ ಕೋಳಿ ಸಾವು, ಆತಂಕ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:55 IST
Last Updated 2 ಮಾರ್ಚ್ 2026, 5:55 IST
ಔರಾದ್ ತಾಲ್ಲೂಕಿನ ಗಣೇಶಪೂರ ತಾಂಡಾದಲ್ಲಿ ನಾಟಿ ಕೋಳಿ ಸತ್ತಿವೆ
ಔರಾದ್ ತಾಲ್ಲೂಕಿನ ಗಣೇಶಪೂರ ತಾಂಡಾದಲ್ಲಿ ನಾಟಿ ಕೋಳಿ ಸತ್ತಿವೆ   

ಔರಾದ್: ತಾಲ್ಲೂಕಿನ ಗಣೇಶಪೂರ (ಬಿ) ತಾಂಡಾದಲ್ಲಿ 40ಕ್ಕೂ ಹೆಚ್ಚು ನಾಟಿ ಕೋಳಿ ಸಾವನ್ನಪ್ಪಿದ್ದು, ಇವುಗಳಿಗೆ ವಿಷ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಶನಿವಾರ ರಾತ್ರಿ ಮನೆ ಹಿಂಬದಿಯಲ್ಲಿ ಸುರಕ್ಷಿತವಾಗಿದ್ದ ಕೋಳಿಗಳು ಭಾನುವಾರ ಬೆಳಿಗ್ಗೆ ಎದ್ದು ನೋಡುತ್ತಿದ್ದಂತೆ ಅವು ಸಾವನ್ನಪ್ಪಿವೆ ಎಂದು ಸಾಕಾಣಿಕೆದಾರ ತಾನಾಜಿ ಜಾಧವ್ ಆತಂಕ ವ್ಯಕ್ತಪಡಿದ್ದಾರೆ.

ಹೋಳಿ ಹಬ್ಬಕ್ಕೆ ಮಾರಾಟ ಮಾಡಲೆಂದು ಐದಾರು ತಿಂಗಳಿನಿಂದ ಸಾಕಿದ 60 ಕೋಳಿಗಳ ಪೈಕಿ 40 ಸಾವನ್ನಪ್ಪಿವೆ. ಇನ್ನು ನಾಲ್ಕೈದು ಕೋಳಿ ಅಸ್ವಸ್ಥಗೊಂಡಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಈಗ ಹೋಳಿ ಹಬ್ಬ ಇರುವುದರಿಂದ ನಾಟಿ ಕೋಟಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಮಾರಾಟ ಮಾಡದೆ ಹಾಗೆ ಇಟ್ಟಿದ್ದೇನೆ. ಆದರೆ ಏಕಾಏಕಿ ಕೋಳಿ ಸತ್ತಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ. ಈ ಕುರಿತು ಔರಾದ್ ಪೊಲೀಸ್ ಠಾಣೆ ಹಾಗೂ ಪಶು ವೈದ್ಯರಿಗೂ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.