ಬೀದರ್: ಬೆಂಗಳೂರು ಬಳಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಂದು ಚಿರತೆ ಸಫಾರಿ ಅಂಗಳದಲ್ಲಿ ವಾಹನದ ಕಿಟಕಿ ಬಳಿ ಕೈ ಇಟ್ಟಿದ್ದ ಬಾಲಕನಿಗೆ ಚಿರತೆ ಗಾಯಗೊಳಿಸಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಎಲ್ಲ ಸಫಾರಿ ವಾಹನಗಳ ಕಿಟಕಿ ಮತ್ತು ಛಾಯಾಗ್ರಹಣದ ರಂಧ್ರಗಳಿಗೆ ಕಡ್ಡಾಯವಾಗಿ ಜಾಲರಿ ಅಳವಡಿಸಲು ಸೂಚಿಸಿದ್ದಾರೆ.
ಸಫಾರಿಯ ವೇಳೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರಿಗೆ ಸೂಕ್ತ ಎಚ್ಚರಿಕೆ ನೀಡಲು ಹಾಗೂ ಸಫಾರಿ ಟಿಕೆಟ್ ನಲ್ಲಿಯೇ ಎಚ್ಚರಿಕೆಯ ಸಂದೇಶ ಮುದ್ರಿಸುವಂತೆ ಅವರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.