ADVERTISEMENT

ಬಸವಕಲ್ಯಾಣ| ಭಾಗ್ಯವಂತಿ ದೇವಿಯಿಂದ ಸಾಮಾಜಿಕ ಕಾರ್ಯ: ಬಾಬು ಹೊನ್ನಾನಾಯಕ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:54 IST
Last Updated 19 ಜನವರಿ 2026, 5:54 IST
ಬಸವಕಲ್ಯಾಣ ತಾಲ್ಲೂಕಿನ ನಿರ್ಗುಡಿಯಲ್ಲಿ ಭಾನುವಾರ ಪುಣೆಯ ದಾದಾ ಮಹಾರಾಜ ಅವರ ತುಲಾಭಾರ ನೆರವೇರಿಸಲಾಯಿತು. ಮಾತೆ ಭಾಗ್ಯವಂತಿದೇವಿ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ನಿರ್ಗುಡಿಯಲ್ಲಿ ಭಾನುವಾರ ಪುಣೆಯ ದಾದಾ ಮಹಾರಾಜ ಅವರ ತುಲಾಭಾರ ನೆರವೇರಿಸಲಾಯಿತು. ಮಾತೆ ಭಾಗ್ಯವಂತಿದೇವಿ ಇದ್ದರು   

ಬಸವಕಲ್ಯಾಣ: ‘ಮಾತೆ ಭಾಗ್ಯವಂತಿದೇವಿ ಅವರು ವಿವಿಧ ಸಾಮಾಜಿಕ ಕಾರ್ಯ ಕೈಗೊಳ್ಳುತ್ತಿರುವುದು ಶ್ಲಾಘನೀಯ' ಎಂದು ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್ ಹೇಳಿದ್ದಾರೆ.

ತಾಲ್ಲೂಕಿನ ನಿರ್ಗುಡಿಯ ಲಕ್ಷ್ಮಿದೇವಿ ಮತ್ತು ಭಾಗ್ಯವಂತಿದೇವಿ ದೇವಸ್ಥಾನದಲ್ಲಿ ನಾಲ್ಕು ದಿನಗಳವರೆಗೆ ಆಯೋಜಿಸಿರುವ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವಸ್ಥಾನಗಳ ಉತ್ತಮ ನಿರ್ವಹಣೆಯ ಜೊತೆಯಲ್ಲಿಯೇ ಇದುವರೆಗೆ 200ಕ್ಕೂ ಅಧಿಕ ಗೋವುಗಳನ್ನು ಮಾತೆ ಭಾಗ್ಯವಂತಿದೇವಿ ಅವರು ಭಕ್ತರಿಗೆ ದಾನವಾಗಿ ನೀಡಿದ್ದಾರೆ. ಅನ್ನದಾನಕ್ಕೂ ಆದ್ಯತೆ ನೀಡುತ್ತಿದ್ದಾರೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ ಮಾತನಾಡಿ, ‘ಧರ್ಮಾಚರಣೆಯಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ’ ಎಂದರು. ಉಪನ್ಯಾಸಕ ರಮಾಕಾಂತ ಬಿರಾದಾರ ಮಾತನಾಡಿ, ‘ಮಾತೆ ಭಾಗ್ಯವಂತಿ ದೇವಿ ಅವರು ಕೈಗೊಳ್ಳುತ್ತಿರುವ ಉತ್ತಮ ಕಾರ್ಯಗಳಿಂದ ಊರಿಗೆ ಕೀರ್ತಿ ಬಂದಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ, ಸೋನಾಲಿ ವಿಜಯಸಿಂಗ್, ಚಂದ್ರಕಾಂತ, ಅನಿಲ ಚಿಕ್ಕನಾಗಾಂವ ಮಾತನಾಡಿದರು. ಪುಣೆಯ ದಾದಾ ಮಹಾರಾಜ ಅವರಿಗೆ ನಾಣ್ಯಗಳಿಂದ ತುಲಾಭಾರ ನೆರವೇರಿಸಲಾಯಿತು.

ಮಾತೆ ಭಾಗ್ಯವಂತಿದೇವಿ, ದೇವಸ್ಥಾನ ಸಮಿತಿ ಅಧ್ಯಕ್ಷ ಸಂತೋಷ ಬಿರಾದಾರ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶರಣಬಸಪ್ಪ ದಳಪತಿ, ಪ್ರಮುಖರಾದ ಸತೀಶಕುಮಾರ ಮುಳೆ, ಸಂಜೀವಕುಮಾರ ಸೂಗೂರೆ, ಸಿದ್ರಾಮಪ್ಪ ಗುದಗೆ, ಬಾಲಾಜಿ ಚಂಡಕಾಪುರೆ, ಸದಾನಂದ ಬಿರಾದಾರ, ಜ್ಞಾನೋಬಾ ನಿಟ್ಟೂರೆ, ಸೂರಜ್ ಪಾಟೀಲ, ವೀರಶೆಟ್ಟಿ ಮಲಶೆಟ್ಟಿ ಬೇಲೂರ, ಮಂಜುನಾಥ ಧುತ್ತರಗಾಂವ, ರಾಜೀವ ಭೋಸ್ಲೆ, ಬಸವಣ್ಣಪ್ಪ ಕಣಜೆ ಉಪಸ್ಥಿತರಿದ್ದರು. ಕಲ್ಯಾಣರಾವ್ ಮದರಗಾಂವಕರ್ ಮತ್ತು ಸೂರ್ಯಕಾಂತ ಬಿರಾದಾರ ಅವರ ಬಳಗದಿಂದ ಸಂಗೀತ ಪ್ರಸ್ತುತಪಡಿಸಲಾಯಿತು.

ಬಸವಕಲ್ಯಾಣ ತಾಲ್ಲೂಕಿನ ನಿರ್ಗುಡಿಯಲ್ಲಿ ಭಾನುವಾರ ನಡೆದ ಜಾತ್ರೆಯ ಉದ್ಘಾಟನೆಯಲ್ಲಿ ಮಾತೆ ಭಾಗ್ಯವಂತಿದೇವಿ ದಾದಾ ಮಹಾರಾಜ ಬಾಬು ಹೊನ್ನಾನಾಯಕ ಇದ್ದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.