ADVERTISEMENT

ಭಾಲ್ಕಿ: ಭೀಮಣ್ಣ ಖಂಡ್ರೆ ನಿವಾಸಕ್ಕೆ ಮಠಾಧೀಶರು, ಗಣ್ಯರ ದಂಡು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 17:01 IST
Last Updated 13 ಜನವರಿ 2026, 17:01 IST
   

ಬೀದರ್: ಭೀಮಣ್ಣ ಖಂಡ್ರೆಯವರ ಯೋಗಕ್ಷೇಮ, ಆರೋಗ್ಯ ವಿಚಾರಿಸಲು ಮಂಗಳವಾರವೂ ಅವರ ಭಾಲ್ಕಿ ನಿವಾಸಕ್ಕೆ ರಾಜ್ಯದ ವಿವಿಧ ಭಾಗಗಳ ಮಠಾಧೀಶರು, ರಾಜಕಾರಣಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಭೇಟಿ ನೀಡಿದರು.

ಬೆಳಕು ಹರಿಯುತ್ತಿದ್ದಂತೆ ಆರಂಭಗೊಂಡ ಜನರ ಭೇಟಿ, ರಾತ್ರಿವರೆಗೆ ನಡೆದೇ ಇತ್ತು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಹಾರಕೂಡದ ಚನ್ನವೀರ ಶಿವಾಚಾರ್ಯರು, ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಮುಗುಳಖೋಡ-ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಹುಡುಗಿ– ಹಿರೇನಾಗಾಂವ್‌ ಸ್ವಾಮೀಜಿ ಸೇರಿ, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಮುಖಂಡರಾದ ಡಿ.ಕೆ. ಸಿದ್ರಾಮ, ಗುರುನಾಥ ಕೊಳ್ಳೂರು ಸೇರಿದಂತೆ ಇನ್ನಿತರರು ಭೇಟಿ ಕೊಟ್ಟು, ಅಲ್ಲಿಯೇ ಇದ್ದ ಸಚಿವ ಈಶ್ವರ ಬಿ. ಖಂಡ್ರೆ ಅವರೊಂದಿಗೆ ಸಮಾಲೋಚಿಸಿದರು. ಸಂಸದ ಸಾಗರ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಅಲ್ಲಿಯೇ ಇದ್ದರು.

ವೈದ್ಯಲೋಕಕ್ಕೂ ಅಚ್ಚರಿ:

‘ಭೀಮಣ್ಣ ಖಂಡ್ರೆ ಅವರು ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಅವರ ಆರೋಗ್ಯ ಇನ್ನಷ್ಟು ಸುಧಾರಿಸಿದೆ. ಇದು ವೈದ್ಯಲೋಕಕ್ಕೂ ಅಚ್ಚರಿಯೇ ಸರಿ. ಬಹುಶಃ ಅವರ ಜೀವನ ಶೈಲಿಯೇ ಇದಕ್ಕೆ ಕಾರಣ ಇರಬಹುದು’ ಎಂದು ಅವರನ್ನು ಉಪಚರಿಸುತ್ತಿರುವ ವೈದ್ಯರ ತಂಡದಲ್ಲಿರುವವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.