ಹುಲಸೂರು: ಬೀದರ ಜಿಲ್ಲೆ ಹುಲಸೂರು ತಾಲೂಕಿನ ತೊಗಲೂರ/ಹಾಲಹಲ್ಳಿ ಗ್ರಾಮ ಶಿವಾರದ ಮದ್ಯದಲ್ಲಿರುವ ಸಿದ್ಧಾರೂಢ ಮಠದ ಅಧಿಕಾರ ಹಸ್ತಾಂತರ, ಧಾರ್ಮಿಕ ಸಭೆ ಮತ್ತು ಸನ್ಮಾನ ಸಮಾರಂಭ ಸೆ.13ರಂದು ಬೆಳಿಗ್ಗೆ 9.00 ಗಂಟೆಗೆ ನಡೆಯಲಿದೆ.
ಬೀದರ್‌ನ ಚಿದಾಂಬರಾಶ್ರಮದ ವೇದಾಂತ ವಾಗೀಶ ಶಿವಕುಮಾರ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು, ಮುಚಳಂಬ ನಾಗಭೂಷಣ ಶಿವಯೋಗಿ ಮಠದ ಪ್ರಣಾವನಂದ ಮಹಾಸ್ವಾಮಿ ಹಾಗೂ ಚಳಕಾಪುರದ ಸಿದ್ಧಾರೂಢ ಮಠದ ಶಂಕರಾನಂದ ಮಹಾಸ್ವಾಮೀಜಿ ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವಕಲ್ಯಾಣ ಶಾಸಕ ಶರಣು ಸಲಗರ, ಬಸವ ಕಲ್ಯಾಣ ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ ಭಾಗವಹಿಸಲಿದ್ದಾರೆ.
ಗೌರವ ಸನ್ಮಾನ: ಇದೇ ಸಂದರ್ಭದಲ್ಲಿ ಸಿದ್ಧಾರೂಢ ಮಠವನ್ನು ಹಸ್ತಾಂತರಿಸಿದ ಲಿಂ.ಚನ್ನಪ್ಪ ಧಬಾಲೆ ಕುಟುಂಬಸ್ಥರಿಗೆ ಮತ್ತು ನೀರಾವರಿ ಇಲಾಖೆ ಎಇ ಚಂದ್ರಕಾಂತ ಸಕ್ಕರಭಾವಿ ಹಾಗೂ ನೀರಾವರಿ ಇಲಾಖೆ ಜೆಇ ಗುರುಬಸಪ್ಪ ಜಗನ್ನಾಥಪ್ಪ ಅವರನ್ನು ಗೌರವಿಸಲಾಗುತ್ತದೆ. ಕಾಶಪ್ಪ ದೇವಗೊಂಡಾ ಅವರು ತುಲಾಭಾರ ನಡೆಸಿಕೊಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.