ADVERTISEMENT

ಔರಾದ್: 22 ಯುವಕರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:04 IST
Last Updated 25 ಸೆಪ್ಟೆಂಬರ್ 2021, 5:04 IST
ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಶಿಬಿರದಲ್ಲಿ ರಕ್ತದಾನ ಮಾಡಿದ ಕಾರ್ಯಕರ್ತರಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರವೀಣ ಮಾಸಿಮಾಡೆ ಪ್ರಮಾಣಪತ್ರ ನೀಡಿದರು. ಧುರೀಣ ಬಂಡೆಪ್ಪ ಕಂಟೆ, ರಾಮಶೆಟ್ಟಿ ಪನ್ನಾಳೆ, ಶರಣಬಸಪ್ಪ ಪಾಟೀಲ ಹಾಗೂ ಸಂದೀಪ ಪಾಟೀಲ ಇದ್ದಾರೆ
ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಶಿಬಿರದಲ್ಲಿ ರಕ್ತದಾನ ಮಾಡಿದ ಕಾರ್ಯಕರ್ತರಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರವೀಣ ಮಾಸಿಮಾಡೆ ಪ್ರಮಾಣಪತ್ರ ನೀಡಿದರು. ಧುರೀಣ ಬಂಡೆಪ್ಪ ಕಂಟೆ, ರಾಮಶೆಟ್ಟಿ ಪನ್ನಾಳೆ, ಶರಣಬಸಪ್ಪ ಪಾಟೀಲ ಹಾಗೂ ಸಂದೀಪ ಪಾಟೀಲ ಇದ್ದಾರೆ   

ಔರಾದ್: ಬಿಜೆಪಿ ಯುವ ಮೋರ್ಚಾದ ವತಿಯಿಂದ ಸೇವಾ ಸಮರ್ಪಣಾ ಅಭಿಯಾನದ ಅಂಗವಾಗಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.

ಬಿಜೆಪಿ ಯುವ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಚೇತನ ಕಪ್ಪೆಕೇರಿ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಖೂಬಾ, ಯಾದು ಮೇತ್ರೆ, ಪ್ರವೀಣ ಬುಟ್ಟೆ ಹಾಗೂ ವಿವೇಕ ದ್ಯಾಡೆ ಸೇರಿದಂತೆ 22 ಕಾರ್ಯಕರ್ತರು ರಕ್ತದಾನ ಮಾಡಿದರು.

ಧುರೀಣ ಬಂಡೆಪ್ಪ ಕಂಟೆ ಮಾತನಾಡಿ,‘ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ದೇಶದೆಲ್ಲೆಡೆ ಸೇವಾ ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಅಂಗವಾಗಿ ಇಲ್ಲಿ ನಡೆದ ಶಿಬಿರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ರಕ್ತದಾನ ಮಾಡಿದ್ದು ಮಹತ್ವದ ಕಾರ್ಯ’ ಎಂದು ಹೇಳಿದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿ,‘ರಕ್ತದಾನ ಮತ್ತೊಬ್ಬರ ಜೀವ ಉಳಿಸುವ ಪವಿತ್ರ ಕಾರ್ಯ’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಪ್ರವೀಣ ಮಾಸಿಮಾಡೆ, ಧುರೀಣ ಕೇರಬಾ ಪವಾರ್, ಖಂಡೋಬಾ ಕಂಗಟೆ, ಸಂಜು ವಡೆಯರ್, ಸಂತೋಷ ಖಾನಾಪುರೆ, ಶಿವಕುಮಾರ ಪಾಂಚಾಳ, ಶರಣಪ್ಪ ಪಾಟೀಲ, ಶ್ರೀಮಂತ ಪಾಟೀಲ ಹೆಡಗಾಪುರ, ಚೆನ್ನಬಸಪ್ಪ ಕೌಠಾ ಹಾಗೂ ಸಂದೀಪ ಪಾಟೀಲ ಇದ್ದರು.

ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಖೂಬಾ ಅವರು ಆಸ್ಪತ್ರೆ ರೋಗಿಗಳಿಗೆ ಹೊದಿಕೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.