ADVERTISEMENT

‘ತುಳಿದು ಬಾಳುವುದಕ್ಕಿಂತ, ತಿಳಿದು ಬಾಳಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 17:00 IST
Last Updated 20 ನವೆಂಬರ್ 2019, 17:00 IST
ಸಂಗಮ ಗ್ರಾಮದ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಮತ್ತು ಅಮ್ಮನ ಕೈತುತ್ತು ಕಾರ್ಯಕ್ರಮ ನಡೆಯಿತು
ಸಂಗಮ ಗ್ರಾಮದ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಮತ್ತು ಅಮ್ಮನ ಕೈತುತ್ತು ಕಾರ್ಯಕ್ರಮ ನಡೆಯಿತು   

ಕಮಲನಗರ: ‘ಜೀವನದಲ್ಲಿ ಒಬ್ಬರನ್ನು ತುಳಿದು ಬಾಳುವುದಕ್ಕಿಂತ, ತಿಳಿದು ಬಾಳಬೇಕು. ಆಗ ಮಾತ್ರ ಬದುಕಿಗೆ ನಿಜವಾದ ಅರ್ಥ ಬರುತ್ತದೆ’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಸಂಗಮ ಗ್ರಾಮದ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಅಮ್ಮನ ಕೈತುತ್ತು ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ರಾಷ್ಟ್ರದ ನಿಜವಾದ ಸಂಪತ್ತು. ಸದೃಢ ರಾಷ್ಟ್ರ ನಿರ್ಮಾಣ ಮಾಡುವ ಶಕ್ತಿ ಯುವ ಸಮುದಾಯಕ್ಕಿದೆ. ಯುವ ಜನಾಂಗ ಜ್ಞಾನದ ಹಣತೆ ಹಚ್ಚುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನವಿದ್ದಂತೆ. ಎಚ್ಚರಿಕೆಯಿಂದ ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ ನೇತೃತ್ವ ವಹಿಸಿದ್ದರು. ಶಾಲೆ ಉಪಾಧ್ಯಕ್ಷ ಅನೀಲಕುಮಾರ ಹೊಳಸಂಬ್ರೆ, ಮುಖ್ಯಶಿಕ್ಷಕಿ ಸಂಪೂರ್ಣ ಕರಿಮಣಿ ಹಾಗೂ ಪಾಲಕರು ಇದ್ದರು.

ಸಂಜೀವಕುಮಾರ ಮೇಂಗಾ ನಿರೂಪಿಸಿದರು. ಪುಷ್ಪಾ ಸ್ವಾಗತಿಸಿದರು. ದಾಕ್ಷಾಯಿಣಿ ವಂದಿಸಿದರು.

ಅಮ್ಮನ ಕೈತುತ್ತು ಕಾರ್ಯಕ್ರಮದಲ್ಲಿ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ಕೈತುತ್ತು ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.