ADVERTISEMENT

ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:08 IST
Last Updated 21 ಡಿಸೆಂಬರ್ 2025, 6:08 IST
<div class="paragraphs"><p></p><p>ಬೀದರ್‌ನಲ್ಲಿ ಅತಿ ಕನಿಷ್ಠ ತಾಪಮಾನ ದಾಖಲಾಗಿದೆ.</p><p></p></div>

ಬೀದರ್‌ನಲ್ಲಿ ಅತಿ ಕನಿಷ್ಠ ತಾಪಮಾನ ದಾಖಲಾಗಿದೆ.

ADVERTISEMENT
   

ಪ್ರಜಾವಾಣಿ ಚಿತ್ರ

ವಿಜಯಪುರ: ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಶೀತಗಾಳಿ ಬೀಸುತ್ತಿದ್ದು, ದಟ್ಟ ಮಂಜು ಆವರಿಸಿದೆ. ತಾಪಮಾನ ತೀವ್ರ ಕುಸಿತ ಕಂಡಿದೆ.

ಬೀದರ್‌ನಲ್ಲಿ ಶನಿವಾರ ಕನಿಷ್ಠ ಅಂದರೆ 5.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಉಳಿದಂತೆ ಬೆಳಗಾವಿ 5.9, ಧಾರವಾಡ 6.4, ವಿಜಯನಗರ 6.6, ಬಾಗಲಕೋಟೆ 6.8, ವಿಜಯಪುರ 6.9, ಗದಗ 7.6, ಹಾವೇರಿ 7.6, ಕಲಬುರ್ಗಿ 7.8, ಉತ್ತರ ಕನ್ನಡ 8.4, ಕೊಪ್ಪಳ 8.8, ರಾಯಚೂರು 9.8, ಯಾದಗಿರಿ 10, ಬಳ್ಳಾರಿ 10.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಹಗಲು ಮೈಸುಡುವ ಬಿಸಿಲು, ರಾತ್ರಿ ನಡುಕ ಹುಟ್ಟಿಸುವ ಚಳಿಯಿಂದ ಜನ ಹೈರಾಣಾಗಿದ್ದಾರೆ. ಶೀತ, ಕೆಮ್ಮು, ಕಫ, ಜ್ವರದಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.