ADVERTISEMENT

ಬೀದರ್‌ ಉತ್ಸವಕ್ಕೆ ಸಂಜೆ 4 ಗಂಟೆ ಒಳಗೆ ಬನ್ನಿ: ಸಾರ್ವಜನಿಕರಿಗೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 5:22 IST
Last Updated 9 ಜನವರಿ 2023, 5:22 IST
 ಗೋವಿಂದ ರಡ್ಡಿ
ಗೋವಿಂದ ರಡ್ಡಿ   

ಬೀದರ್: ಬೀದರ್‌ ಉತ್ಸವದ ಎರಡನೆಯ ದಿನದ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆಯಿಂದ ರಾತ್ರಿ ವರೆಗೂ ಐದು ಲಕ್ಷಕ್ಕೂ ಅಧಿಕ ಜನ ಬಂದು ಹೋಗಿದ್ದಾರೆ. ಸಾರ್ವಜನಿಕರ ಜನದಟ್ಟಣೆ ನಿಯಂತ್ರಿಸಲು ಕೆಲ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ತಿಳಿಸಿದ್ದಾರೆ.

ಕೋಟೆಯ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ವೀಕ್ಷಣೆಗೆ ಬರುವವರು ಇಂದು (ಸೋಮವಾರ) ಸಂಜೆ 4 ಗಂಟೆ ಒಳೆಗೆ ಬರಬೇಕು. ಕಾರ್ಡ್‌ ಹೊಂದಿದವರು ಜ್ಞಾನಸುಧಾ ಕಡೆಗೆ ಹೋಗುವ ಮಾರ್ಗದಲ್ಲಿರುವ ದೆಹಲಿ ದರ್ವಾಜಾದ ಮೂಲಕ 4 ಗಂಟೆ ಮುಂಚೆಯೇ ಬರಬೇಕು. ನಂತರ ಬರುವ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಹೇಳಿದ್ದಾರೆ.

ಸಂಜೆ 5 ಗಂಟೆಯ ನಂತರ ಬರುವವರು ಕಾರ್ಡ್ ಹೊಂದಿರುವವರು ಫೋರ್ಟ್‌ನ ಹೊರಗೆ ವಾಹನಗಳನ್ನು ನಿಲ್ಲಿಸಬೇಕು ಮತ್ತು ಕೋಟೆಯ ಒಳಗಡೆಗೆ ನಡೆದುಕೊಂಡು ಬರಬೇಕು. ಜಿಲ್ಲಾ ವಿಜ್ಞಾನ ಉಪ ಕೇಂದ್ರ ಮತ್ತು ಇತರ ಕಚೇರಿಗಳ ಕಚೇರಿಗಳ ಎದುರು ಪಾರ್ಕಿಂಗ್ ಮಾಡಬಹುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.