ADVERTISEMENT

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಅತ್ಯಧಿಕ ಆದಾಯ ತಂದುಕೊಟ್ಟ ನಿರ್ವಾಹಕ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 12:34 IST
Last Updated 17 ಮಾರ್ಚ್ 2023, 12:34 IST
ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು
ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು   

ಬೀದರ್: ಭಾಲ್ಕಿ ಬಸ್ ಡಿಪೊ ನಿರ್ವಾಹಕ ಆರ್.ಬಿ. ರಮೇಶ (ಐಸಿ ನಂ. 856) ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗ (ರೂಟ್ ಸಂಖ್ಯೆ 51ಬಿಎ)ದಲ್ಲಿ ಅತ್ಯಧಿಕ ಆದಾಯದ ಸಾಧನೆ ಮಾಡಿದ್ದಾರೆ.

ಈ ಮಾರ್ಗದಲ್ಲಿ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವಾರದಲ್ಲೇ ಎರಡು ಬಾರಿ ಅಧಿಕ ಆದಾಯ ತಂದಿದ್ದಾರೆ.
ಒಮ್ಮೆ 30,926 (ಇಪಿಕೆಎಂ 66.65) ಹಾಗೂ ಇನ್ನೊಮ್ಮೆ ರೂ. 28,517 (ಇಪಿಕೆಎಂ 61.45) ಆದಾಯ ದಾಖಲಿಸಿದ್ದಾರೆ. ಹಿಂದೆಯೂ ಅವರು ಅನೇಕ ಮಾರ್ಗಗಳಲ್ಲಿ ಸರ್ವಾಧಿಕ ಆದಾಯ ತಂದು ಎಲ್ಲರ ಗಮನ ಸೆಳೆದಿದ್ದಾರೆ.

ಭಾಲ್ಕಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ನಿರ್ವಾಹಕ ಆರ್.ಬಿ. ರಮೇಶ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಟ್ರಾಫಿಕ್ ಇನ್‍ಸ್ಪೆಕ್ಟರ್ ಹಣಮಂತ, ಸಂಚಾರ ನಿಯಂತ್ರಕ ನೆಹಾಲ್, ಆಡಿಟ್ ವಿಭಾಗದ ಶಂಕರ, ಕೆಎಂಪಿಎಲ್ ಮಾಸ್ಟರ್ ಶಾಂತವೀರ, ಚಾಲಕರಾದ ಅನಿಲ್, ಸುಂದರರಾಜ್, ನಿರ್ವಾಹಕರಾದ ಶಿವಕುಮಾರ ಹಾಗೂ ನಟರಾಜ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.