ADVERTISEMENT

ಹುಮನಾಬಾದ್| ಡಾ.ಅಶ್ವತ್ಥನಾರಾಯಣರನ್ನು ಸಚಿವ ಸ್ಥಾನದಿಂದ ವಜಾ ಮಾಡಿ: ಕಾಂಗ್ರೆಸ್

ಬ್ಲಾಕ್ ಕಾಂಗ್ರೆಸ್‌ ಸಮಿತಿ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 5:57 IST
Last Updated 18 ಫೆಬ್ರುವರಿ 2023, 5:57 IST
ಹುಮನಾಬಾದ್ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು
ಹುಮನಾಬಾದ್ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು   

ಹುಮನಾಬಾದ್: ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯ ಅವರ ಕುರಿತು ನೀಡಿದ ಹೇಳಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆ ಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಸಲ್ಲಿಸಲಾಯಿತು.ನಂತರ ಪ್ರಮುಖರು ಮಾತನಾಡಿ,‘ಬಿಜೆಪಿಯವರು ಸಾರ್ವಜನಿಕರಲ್ಲಿ ಜಾತಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಹಾಗೂ ಸಾವರ್ಕರ್ ಅವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಟಿಪ್ಪುಸುಲ್ತಾನ್ ಅವರನ್ನು ಹೊಡೆದಂತೆ ಸಿದ್ದರಾಮಯ್ಯ ಅವರಿಗೆ ಹೊಡೆಯಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.

ಡಾ.ಅಶ್ವತ್ಥನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ನಿಷೇಧ ಹೇರ ಬೇಕು ಎಂದು ಹೇಳಿದರು. ನಂತರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ರೇವಣಸಿದ್ದಪ್ಪ ಪಾಟೀಲ, ಅಫ್ಸರ್ ಮಿಯ್ಯಾ, ಕಂಟೆಪ್ಪ ದಾನಾ, ಓಂಕಾರ ತುಂಬಾ, ಬಾಬು ಟೈಗರ್, ಉಮೇಶ ಜಮಗಿ, ಧರ್ಮರೆಡ್ಡಿ, ಸುರೇಶ ಘಾಂಗ್ರೆ, ವಿಠ್ಠಲರಾವ ಕಲ್ಯಾಣಿ, ಶಿವರಾಜ ಚೀನಕೇರಾ, ಪಂಡಿತ ಬಾವಗಿ, ಅನೀಲ ದೊಡ್ಡಿ, ಗೌತಮ ಚೌವಣ, ನರಸಪ್ಪ, ಲೋಕೇಶ ಮೇತ್ರೆ, ಮಲ್ಲಿಕಾರ್ಜುನ ಮೋಳಕೇರಾ, ಸಚಿನ್, ಗುಂಡಾರೆಡ್ಡಿ, ಅಣ್ಣರಾವ ಪಾಟೀಲ, ಶಿವಕುಮಾರ, ಮಹೇಶ, ಸುಧಾಕರ್, ಅಶೋಕ, ನಾಗೇಶ, ರೇಹಾನ್, ರಫಿ, ಸೈಯದ್ ಜಾಫರ್, ಶಿವಕುಮಾರ ಜೀವಾ, ಲಕ್ಷ್ಮಣ್ ಸಿಂಧೆ, ರವಿಚಂದ್ರ ಸಂಗಮ ಹಾಗೂ ಮಾಣಿಕಪ್ಪ ಹಿಪ್ಪರಗಿ ಸೇರಿದಂತೆ ಹಲವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.