ADVERTISEMENT

ತರಕಾರಿ ಬೆಲೆ ಕುಸಿತ: ಗ್ರಾಹಕ ಸಂತಸ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:25 IST
Last Updated 29 ಫೆಬ್ರುವರಿ 2020, 14:25 IST
ಬೀದರ್‌ನ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್: ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ. ಈ ವಾರ ರೈತರು ಆತಂಕದಲ್ಲಿದ್ದರೆ, ಗ್ರಾಹಕರು ಸಂತಸದಲ್ಲಿದ್ದಾರೆ.

ನುಗ್ಗೆಕಾಯಿ ಬೆಲೆ ಅರ್ಧದಷ್ಟು ಇಳಿದಿದೆ. ನಾಲ್ಕು ವಾರಗಳ ಹಿಂದೆ ಪ್ರತಿ ಕೆ.ಜಿಗೆ ₹ 100 ದಾಟಿದ್ದ ನುಗ್ಗೆಕಾಯಿ ಬೆಲೆ ಈಗ ₹ 50ಕ್ಕೆಇಳಿದಿದೆ. ಈರುಳ್ಳಿ ಬೆಲೆಯೂ₹30ಗೆ ಇಳಿದಿದೆ. ಬೆಳ್ಳುಳ್ಳಿ ಬೆಲೆ ಸ್ಥಿರವಾಗಿದೆ.

ಪಾಲಕ ಸೊಪ್ಪು, ಟೊಮೆಟೊ, ಕೊತಂಬರಿ, ಬೀಟ್‌ರೂಟ್‌ ಹಾಗೂ ಹೂಕೋಸು ಬೆಲೆ ಪ್ರತಿ ಕೆಜಿಗೆ ₹ 10 ಕಡಿಮೆಯಾಗಿದೆ. ಎಲೆಕೋಸು ಬೆಲೆ ಮಾತ್ರ ಪ್ರತಿ ಕೆ.ಜಿಗೆ ₹ 10 ಹೆಚ್ಚಾಗಿದೆ. ಇನ್ನುಳಿದ ಆಲೂಗಡ್ಡೆ, ಬದನೆಕಾಯಿ, ಸಬ್ಬಸಗಿ, ತೊಂಡೆಕಾಯಿ, ಕರಿಬೇವು ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ADVERTISEMENT

ಸ್ಥಳೀಯ ಮಾರುಕಟ್ಟೆಗೆ ಹೈದರಾಬಾದ್‌ನಿಂದ ಎಲೆಕೋಸು, ಹೂಕೋಸು, ಗಜ್ಜರಿ , ಬೀನ್ಸ್ , ಬೆಂಡೆಕಾಯಿ, ಮೆಣಸಿನ ಕಾಯಿ ಆವಕವಾಗಿವೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿವೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಟೊಮೆಟೊ, ಬದನೆಕಾಯಿ, ಹಿರೇಕಾಯಿ, ಪಾಲಕ, ಮೆಂತೆ ಹಾಗೂ ಸಬ್ಬಸಗಿ, ಮಾರುಕಟ್ಟೆಗೆಬಂದಿವೆ ಎಂದು ತರಕಾರಿವ್ಯಾಪಾರಿ ವಿಜಯಕುಮಾರ ಕಡ್ಡಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.