ADVERTISEMENT

ಬೀದರ್‌ | ಶ್ರದ್ಧಾ, ಭಕ್ತಿಯ ದತ್ತ ಜಯಂತಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:28 IST
Last Updated 5 ಡಿಸೆಂಬರ್ 2025, 7:28 IST
ದತ್ತ ಜಯಂತಿ ಅಂಗವಾಗಿ ನಡೆದ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸಲಾಯಿತು
ದತ್ತ ಜಯಂತಿ ಅಂಗವಾಗಿ ನಡೆದ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸಲಾಯಿತು   

ಬೀದರ್‌: ನೆರೆಯ ತೆಲಂಗಾಣದ ಜಹೀರಾಬಾದ್‌ ಸಮೀಪದ ಬರಿದಾಪೂರದಲ್ಲಿ ಬುಧವಾರ ದತ್ತ ಜಯಂತಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. 

ಚಂಡಿ ಹೋಮ, ಪೂರ್ಣಾಹುತಿ, ಸ್ವಾಮಿಗೆ ಡೋಲಾರೋಹಣ ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮಗಳು ಸಡಗರದಿಂದ ಜರುಗಿದವು. ದತ್ತಗಿರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು. 116 ದಂಪತಿ ಯಜ್ಞದಲ್ಲಿ ಪಾಲ್ಗೊಂಡಿದ್ದರು.

ಶಿಖಾಮಣಿ ಅವಧೂತ ಗಿರಿ ಮಹಾರಾಜ್ ಹಾಗೂ ಸಿದ್ಧೇಶ್ವರಾನಂದ ಗಿರಿ ಮಹಾರಾಜ್ ಸಾನ್ನಿಧ್ಯ ವಹಿಸಿ, ಭಾರತವು ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಮನ್ವಯದ ನಾಡಾಗಿದೆ.  ಪ್ರತಿಯೊಬ್ಬರೂ ಭಾರತೀಯ ಸಂಸ್ಕೃತಿಯನ್ನು ಪಾಲಿಸಬೇಕು. ಗುರು-ತಾಯಿ, ತಂದೆಯನ್ನು ಗೌರವಿಸಬೇಕು ಎಂದು ಹೇಳಿದರು.

ADVERTISEMENT

ಟ್ರಸ್ಟ್ ಅಧ್ಯಕ್ಷ ಅಲ್ಲಾಡಿ ವೀರೇಶಂ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.