ADVERTISEMENT

ಪತ್ರಿಕಾ ದಿನಾಚರಣೆ | ಒಂದೇ ಕುಟುಂಬದಲ್ಲಿ ಅಧಿಕಾರ; ಅಭಿವೃದ್ಧಿ ಯಾಕಿಲ್ಲ: ಸಿದ್ರಾಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 3:16 IST
Last Updated 27 ಜುಲೈ 2025, 3:16 IST
ಭಾಲ್ಕಿಯ ಬಾಲಾಜಿ ಮಂದಿರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿದರು
ಭಾಲ್ಕಿಯ ಬಾಲಾಜಿ ಮಂದಿರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿದರು   

ಭಾಲ್ಕಿ: ‘ಒಂದೇ ಕುಟುಂಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ, ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಇದ್ದಾಗಲೂ ಜಿಲ್ಲೆಯ ಅಭಿವೃದ್ಧಿ ಏಕಾಗುತ್ತಿಲ್ಲ. ಅನ್ನದಾತರೇಕೆ ಸಮಸ್ಯೆಗಳ ಸುಳಿಯಲ್ಲಿದ್ದಾರೆ’ ಎಂದು ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಪ್ರಶ್ನಿಸಿದರು.

ಪಟ್ಟಣದ ಬಾಲಾಜಿ(ರಾಮ) ಮಂದಿರದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಲ್ಕಿಯಲ್ಲಿ ಕ್ರಾಂತಿಯ ವಾತಾವರಣ ನಿರ್ಮಾಣವಾಗಿದೆ. ಶ್ರಮಿಕ ಕಾರ್ಯಕರ್ತರು ನಮ್ಮ ಪುಣ್ಯ. ಎಲ್ಲಾದರೂ ತಪ್ಪಾಗಿದ್ದರೆ ನಾಯಕರಿಂದಾಗಿದೆಯೇ ಹೊರತು ಕಾರ್ಯಕರ್ತರಿಂದಲ್ಲ. ಕತ್ತಲು ಸರಿದು ಬೆಳಕು ಉದಯಿಸುವ ಸಮಯ ಸಮೀಪಿಸುತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

‘ಪತ್ರಕರ್ತನಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಗಡಿ ಭಾಗದ ಸಾಯಿಗಾಂವ ಸೇತುವೆ ನಿರ್ಮಾಣಕ್ಕಾಗಿ ಹೋರಾಟ ನಡೆಸಿದರ ಪರಿಣಾಮ ಸರ್ಕಾರ ಸೇತುವೆ ನಿರ್ಮಿಸಿದೆ’ ಎಂದರು.

ಬಿಜೆಪಿ ಮುಖಂಡರೂ ಆದ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಅರಾಜಕತೆ ಸೃಷ್ಟಿಯಾಗಿದೆ ಎಂದು ದೂರಿದರು.

ಯುವ ಮುಖಂಡ ಚೆನ್ನಬಸವಣ್ಣ ಬಳತೆ ಮಾತನಾಡಿ, ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಶಕ್ತಿ ಮಾಧ್ಯಮಕ್ಕಿದೆ ಎಂದರು.

ಪ್ರಮುಖರಾದ ಶಿವು ಲೋಖಂಡೆ, ಹಿರಿಯ ಮುಖಂಡ ಕಿಶನರಾವ್ ಪಾಟೀಲ ಇಂಚೂರಕರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಕೆ.ಗಣಪತಿ ಮಾತನಾಡಿದರು.

ಸನ್ಮಾನ: ಇದೇ ವೇಳೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಸನ್ಮಾನಿಸಲಾಯಿತು ಜಿ.ಪಂ ಮಾಜಿ ಸದಸ್ಯ ವೆಂಕಟರಾವ್ ಬಿರಾದಾರ, ಪ್ರಮುಖರಾದ ಜನಾರ್ಧನರಾವ್ ಬಿರಾದಾರ, ಪ್ರತಾಪರಾವ್ ಪಾಟೀಲ, ಶಿವಕುಮಾರ ಸಜ್ಜನಶೆಟ್ಟಿ, ಶಶೇರಾವ ಪಾಟೀಲ, ಸಂಗಮೇಶ ಗಾಮಾ, ಪ್ರವೀಣ ಸಾವರೆ, ಪುಂಡಲೀಕರಾವ್ ಪಾಟೀಲ, ಶಿವಕುಮಾರ ಕೇರೂರೆ, ಕೈಲಾಸ ಪಾಟೀಲ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾಗಶೆಟ್ಟಿ ಧರ್ಮಪೂರೆ, ತಾಲ್ಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ ಸೇರಿದಂತೆ ಹಲವರು ಇದ್ದರು.

ಶರದ ದುರ್ಗಾಳೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಜಯರಾಜ ಕೊಳ್ಳಾ ವಂದಿಸಿದರು.

ಭಾಲ್ಕಿ ಕ್ಷೇತ್ರದ ಜನತೆ ಬದಲಾವಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. 1999ರ ವಿಧಾನಸಭೆ ಚುನಾವಣೆಯಂತೆ ಮುಂದಿನ  ಚುನಾವಣೆಯಲ್ಲಿ ಇತಿಹಾಸ ಪುನರ್ ನಿರ್ಮಾಣ ಆಗಲಿದೆ
– ಶಿವರಾಜ ಗಂದಗೆ, ಬಿಜೆಪಿ ಮುಖಂಡ

Quote -

Cut-off box - ‘ಮಾಡದ ತಪ್ಪಿಗೆ ಜೈಲು ಶಿಕ್ಷೆ’ ‘ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಕಾಣದ ಕೈಗಳು ಏನೇ ಅಗ್ನಿ ಪರೀಕ್ಷೆಯೊಡ್ಡಿದ್ದರೂ ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದು ಡಿ.ಕೆ.ಸಿದ್ರಾಮ ಹೇಳಿದರು. ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷನಾಗಿ ಸಕ್ಕರೆ ಇಳುವರಿ ಹೆಚ್ಚಿಸುವುದರ ಜತೆಗೆ ರೈತರಿಗೆ ಸಕಾಲಕ್ಕೆ ಹಣ ಪಾವತಿಸಿದ್ದೇವೆ. ಆದರೆ ಕಾರ್ಖಾನೆ ಅಭಿವೃದ್ಧಿ ನನ್ನ ಏಳಿಗೆ ಸಹಿಸದೇ ಅಧಿಕಾರ ದುರುಪಯೋಗ ಮಾಡಿಕೊಂಡು ವಿನಾಕಾರಣ ನನ್ನನ್ನು ಜೈಲು ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳುತ್ತ ಭಾವುಕರಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.