ADVERTISEMENT

ಬಸವಕಲ್ಯಾಣ| ಶಾಸಕ ಸಲಗರಗೆ ‘ವಿದ್ಯಾವಿಭೂಷಣ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:26 IST
Last Updated 17 ಅಕ್ಟೋಬರ್ 2025, 6:26 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಗುರುವಾರ ಚನ್ನವೀರ ಶಿವಾಚಾರ್ಯರು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿದರು. ಶಾಸಕ ಶರಣು ಸಲಗರ, ಬಾಬು ಹೊನ್ನಾನಾಯಕ್, ಮಲ್ಲಿನಾಥ ಹಿರೇಮಠ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಗುರುವಾರ ಚನ್ನವೀರ ಶಿವಾಚಾರ್ಯರು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿದರು. ಶಾಸಕ ಶರಣು ಸಲಗರ, ಬಾಬು ಹೊನ್ನಾನಾಯಕ್, ಮಲ್ಲಿನಾಥ ಹಿರೇಮಠ ಇದ್ದರು   

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಚನ್ನವೀರ ಶಿವಾಚಾರ್ಯರಿಂದ ಗುರುವಾರ ಶಾಸಕ ಶರಣು ಸಲಗರ ಅವರನ್ನೊಳಗೊಂಡು 66 ಸಾಧಕರಿಗೆ ‘ವಿದ್ಯಾವಿಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಲ್ಲರಿಗೂ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಫಲಕ ನೀಡಲಾಯಿತು.

ಮಲ್ಲಿನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್, ಪ್ರಮುಖರಾದ ಆನಂದ ಪಾಟೀಲ ಉಪಸ್ಥಿತರಿದ್ದರು.

ಪ್ರೊ.ರುದ್ರೇಶ್ವರ ಸ್ವಾಮಿ ಗೋರಟಾ, ಪ್ರಾಚಾರ್ಯ ರಾಚಯ್ಯ ಮಠಪತಿ, ಚನ್ನವೀರ ಜಮಾದಾರ, ಅಂಬಾರಾಯ ಸೈದಾಪುರೆ, ದಯಾನಂದ ಹಿರೇಮಠ ರಾಮತೀರ್ಥ, ಸಂಗೀತಗಾರ ಮಾರುತಿ ಪೂಜಾರಿ ಬಗದೂರಿ, ಗುಂಡಪ್ಪ ಮಡಕೆ, ಶಿವರಾಚಪ್ಪ ವಾಲಿ, ಶ್ರೀದೇವಿ ಖಂಡಾಳೆ, ತುಕಾರಾಮ ಬಸನಾಯಕ, ಕಲ್ಪನಾ ಶೀಲವಂತ, ಚನ್ನವೀರ ಮಠಪತಿ, ಸಂಗೀತಾ ರಾಜಕುಮಾರ ಹಂಜಿಗೆ, ಶರಣಬಸಪ್ಪ ಬಿರಾದಾರ ಹಿರೇನಾಗಾಂವ, ಉಷಾದೇವಿ ಹಿರೇಮಠ ಹಾರಕೂಡ, ಸರೋಜನಿ ಹಿರೇಮಠ, ದಿಲೀಪಕುಮಾರ ಸ್ವಾಮಿ ರಾಜೇಶ್ವರ, ಕಲ್ಪನಾ ಶ್ರೀಶೈಲಸ್ವಾಮಿ ಚಿಟ್ಟೆ, ಶೋಭಾವತಿ ಹತ್ತೆ, ಮಂಜುಳಾ ಹರಕೆ, ಕಲ್ಪನಾ ಶಿಂಧೆ ಏಕಲೂರ, ಭೀಮಾಶಂಕರ ಮಾಶಾಳಕರ್, ಕಲ್ಲಪ್ಪ ಪೂಜಾರಿ ಪಂಢರಗೆರಾ, ಪಂಡಿತ್ ಪೂಜಾರಿ ಹಾಗೂ ಇತರರಿಗೆ ಪ್ರಶಸ್ತಿ ನೀಡಲಾಯಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.