ADVERTISEMENT

ಗಿಡ ನೆಡಿ ಹಸಿರು ಉಳಿಸಿ: ಚಿತ್ರಲೇಖಾ ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 14:15 IST
Last Updated 9 ಜೂನ್ 2020, 14:15 IST
ಭಾಲ್ಕಿ ತಾಲ್ಲೂಕಿನ ಅಂಬೇಸಾಂಗವಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಿತ್ರಲೇಖಾ ಪಾಟೀಲ ಸಸಿಗಳನ್ನು ನೆಟ್ಟರು
ಭಾಲ್ಕಿ ತಾಲ್ಲೂಕಿನ ಅಂಬೇಸಾಂಗವಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಿತ್ರಲೇಖಾ ಪಾಟೀಲ ಸಸಿಗಳನ್ನು ನೆಟ್ಟರು   

ಭಾಲ್ಕಿ: ಮನೆ, ಶಾಲೆ, ಕಚೇರಿ ಸೇರಿದಂತೆ ಎಲ್ಲೆಲ್ಲಿ ಗಿಡಗಳನ್ನು ನೆಡಲು ಸೂಕ್ತ ಸ್ಥಳ ಇದೆಯೋ ಅಲ್ಲೆಲ್ಲಾ ಗಿಡಗಳನ್ನು ಬೆಳೆಸುವುದರ ಮೂಲಕ ಹಸಿರು ವಾತಾವರಣ ನಿರ್ಮಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಿತ್ರಲೇಖಾ ಪಾಟೀಲ ಹೇಳಿದರು.

ತಾಲ್ಲೂಕಿನ ಅಂಬೇಸಾಂಗವಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರೂ ತಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು.

ADVERTISEMENT

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಪೂಜಾರಿ ಮಾತನಾಡಿ,‘ಪರಿಸರದ ಮಹತ್ವ ಅರಿತು ಎಲ್ಲರೂ ಗಿಡ ನೆಡುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಪಂಚಾಯಿತಿ ಕಾರ್ಯಾಲಯದಲ್ಲಿ ಹಾಗೂ ಗ್ರಾಮದ ರಸ್ತೆಗಳ ಪಕ್ಕದಲ್ಲಿ ಸಸಿಗಳನ್ನು ನೆಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮಾ ನರಸಿಂಗರಾವ್, ಉಪಾಧ್ಯಕ್ಷ ರಮೇಶ ಕಾಳೆ, ತಾಲ್ಲೂಕು ಪಂಚಾಯಿತಿ ಸದಸ್ಯ ಭೂದೇವಿ ಸುರೇಶ, ಎ.ಡಿ. ಶಿವಲೀಲಾ, ತೋಟಗಾರಿಕೆ ಅಧಿಕಾರಿ ಓಂಪ್ರಕಾಶ ಮೋರೆ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ ಗಾಯಕವಾಡ, ಆನಂದರಾವ್ ಉಚ್ಚೆ, ಅನಂತಕುಮಾರ ಭೋಸ್ಲೆ, ಕಂಪ್ಯೂಟರ್ ಆಪರೇಟರ್ ಮಹಾದೇವಿ ಇದ್ದರು.

ಸಿದ್ದಾರ್ಥ ಸ್ವಾಗತಿಸಿದರು. ಅನಿಲ್ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.