ADVERTISEMENT

ಬೀದರ್‌: ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ತಂದೆ–ಮಗನ ಸಾವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 13:43 IST
Last Updated 16 ಫೆಬ್ರುವರಿ 2026, 13:43 IST
<div class="paragraphs"><p>ವಿಶ್ವನಾಥ್‌ ಹೊಸಮನಿ ಮತ್ತು&nbsp;ಅಂಬರೀಶ್‌ ಹೊಸಮನಿ</p></div>

ವಿಶ್ವನಾಥ್‌ ಹೊಸಮನಿ ಮತ್ತು ಅಂಬರೀಶ್‌ ಹೊಸಮನಿ

   

ಬೀದರ್‌: ತಂದೆ, ಮಗ ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪ ಸೋಮವಾರ ನಡೆದಿದೆ.

ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ್‌ (ಬಿ) ಗ್ರಾಮದ ವಿಶ್ವನಾಥ್‌ ಹೊಸಮನಿ (53) ಹಾಗೂ ಇವರ ಮಗ ಅಂಬರೀಶ್‌ ಹೊಸಮನಿ (23) ಮೃತರು.

ADVERTISEMENT

ಬೀದರ್‌ನಲ್ಲಿ ಗಾರೆ ಕೆಲಸ ಮುಗಿಸಿಕೊಂಡು ತಂದೆ ಹಾಗೂ ಮಗ ಮನೆಗೆ ಹಿಂತಿರುಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅಂಬರೀಶ್‌ ಅವರು ಕಾರಂಜಾ ಜಲಾಶಯದ ಕಾಲುವೆಯಲ್ಲಿ ಕೈ ಕಾಲು ತೊಳೆದುಕೊಳ್ಳಲು ಇಳಿದಿದ್ದಾರೆ. ಈ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾರೆ. ಮಗನನ್ನು ರಕ್ಷಿಸಲು ಕಾಲುವೆಗಿಳಿದ ತಂದೆ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ. ಧನ್ನೂರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.