ADVERTISEMENT

ಬೆಂಕಿ ತಗುಲಿ ನೆಲಕ್ಕುರುಳಿದ ಮಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 6:51 IST
Last Updated 24 ಏಪ್ರಿಲ್ 2022, 6:51 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಮಾವಿನ ಹಣ್ಣುಗಳು ನೆಲಕ್ಕುರುಳಿರುವುದು
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಮಾವಿನ ಹಣ್ಣುಗಳು ನೆಲಕ್ಕುರುಳಿರುವುದು   

ಖಟಕಚಿಂಚೋಳಿ: ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಮಲ್ಲಾರಿ ಬಿರಾದಾರ ಅವರ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಫಲವತ್ತಾಗಿ ಬೆಳೆದಿದ್ದ ಮಾವಿನ ಗಿಡದ ಹಣ್ಣುಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ. ಇದರಿಂದ ರೈತ ಮಲ್ಲಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸದ್ಯ ಮಾವಿನ ಕಾಯಿ ಸಂಪೂರ್ಣವಾಗಿ ಹಣ್ಣಾಗುವ ಹಂತಕ್ಕೆ ತಲುಪಿತ್ತು. ಮುಂದಿನ ಹದಿನೈದು ದಿನಗಳಲ್ಲಿ ಮಾವು ತೆಗೆದು ಮಾರಾಟ ಮಾಡುತ್ತಿದ್ದೆ. ಇದರಿಂದ ಕೈ ತುಂಬಾ ಆದಾಯ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆ. ಆದರೆ ಈ ಘಟನೆ ಸಂಭವಿಸಿರುವುದರಿಂದ ನನ್ನ ಆಸೆಯ ಮೇಲೆ ತಣ್ಣೀರು ಎರಚಿದಂತಾಗಿದೆ ಎಂದು ರೈತ ಮಲ್ಲಾರಿ ಅಳಲು ತೋಡಿಕೊಂಡರು.

ಮಾವಿನ ಗಿಡಕ್ಕೆ ಬೆಂಕಿ ತಗುಲಿರುವುದರಿಂದ ರೈತನಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.