ADVERTISEMENT

ಕ್ವಾರಂಟೈನ್‌ ಜನರಿಗೆ ಹಣ್ಣು ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 11:58 IST
Last Updated 20 ಮೇ 2020, 11:58 IST
ಚಿತ್ರ: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನರಿಗೆ ಬಿಜೆಪಿ ಮುಖಂಡರು ಹಣ್ಣು ವಿತರಿಸಿದರು
ಚಿತ್ರ: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನರಿಗೆ ಬಿಜೆಪಿ ಮುಖಂಡರು ಹಣ್ಣು ವಿತರಿಸಿದರು   

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನರಿಗೆ ಬುಧವಾರ ಬಿಜೆಪಿ ಮುಖಂಡ ಮಹೇಶ ಮಠಪತಿ ನೇತೃತ್ವದ ತಂಡದವರು ಹಣ್ಣು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ವೈರಾಣುವಿನ ಹರಡುವಿಕೆಯನ್ನು ತಡೆಯಲು ಇತರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದವರಿಗೆ ಕ್ಯಾರಂಟೈನ್ ಕೇಂದ್ರದಲ್ಲಿ ಇಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದೆ ಸರ್ಕಾರದ ಆದೇಶದ ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಹೇಳಿದರು.

ಸುರಕ್ಷತೆಗಾಗಿ ಯಾವಾಗಲೂ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಗ್ರಾಮ ಲೆಕ್ಕಿಗ ರಾಮೇಶ್ವರ, ಪ್ರದೀಪ ಮೇತ್ರಸ್ಕರ್, ರಾಮಯ್ಯಾ ಸ್ವಾಮಿ, ದತ್ತಾತ್ರಿ ಈಡಿಗಾರ, ಅವಿನಾಶ ಮಡಿವಾಳ, ಮಲ್ಲಿಕಾರ್ಜುನ ಮೂಲಗೆ, ಆಸ್ಪತ್ರೆ ಸಿಬ್ಬಂದಿ ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.