ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋಮಾಂಸ ವ್ಯಾಪಾರಕ್ಕೆ ಅವಕಾಶ: ಸಿ.ಎಂ. ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 8 ಮೇ 2023, 2:41 IST
Last Updated 8 ಮೇ 2023, 2:41 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಹುಮನಾಬಾದ್: ‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

‘ಮಣಿಪುರದ ಬಿಜೆಪಿ ಸಚಿವರೊಬ್ಬರು ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಅವರಿಗೆ ಬಿಜೆಪಿಯವರು ಏನು ಮಾಡಿದ್ದೀರಿ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ರಾಜ್ಯದಲ್ಲಿ ರೈತರು ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕಂಗಾಲಾಗಿದ್ದಾರೆ. ಹೈನುಗಾರಿಕೆ ಮಾಡುವುದಕ್ಕಾಗಿ ರೈತರು ₹ 60–70 ಸಾವಿರ ನೀಡಿ ಹಸುಗಳನ್ನು ತಂದರೆ ಅದು ಹಾಲು ನೀಡದಿದ್ದರೆ ಮಾರಾಟ ಮಾಡಿ ಮತ್ತೊಂದು ಹಸು ತರಲು ಅನುಕೂಲ ಆಗಲಿದೆ. ಆದರೆ, ಈ ಕಾಯ್ದೆ ಜಾರಿ ಇರುವುದರಿಂದ ರೈತರು ಯಾರಿಗೆ ಮಾರಾಟ ಮಾಡಬೇಕು? ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು’ ಎಂದರು.

ADVERTISEMENT

ಜೆಡಿಎಸ್ ಅಭ್ಯರ್ಥಿ ಸಿ.ಎಂ. ಫೈಜ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗೌತಮ ಸಾಗರ, ಮುಖಂಡರಾದ ಅಂಕುಶ ಗೋಖಲೆ, ಎ.ಎಂ. ಕುಲಕರ್ಣಿ, ಶಿವಪುತ್ರ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.