ಹುಲಸೂರ: ಸಮೀಪದ ಅಂತರ ಭಾರತಿ ತಾಂಡಾದಲ್ಲಿ ಜಗದಂಬಾ ಮಾತಾ ಹಾಗೂ ಸಂತ ಸೇವಾಲಾಲ್ ಮಹಾರಾಜರ ಜಾತ್ರಾ ಮಹೋತ್ಸವ ವೈಭವದೊಂದಿಗೆ ಜರುಗಿತು.
ಬಸವಕಲ್ಯಾಣ ಶಾಸಕ ಶರಣು ಸಲಗರ ಸಂತ ಸೇವಾಲಾಲ್ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ನಡೆದ ಜಗದಂಬಾ ಮಾತಾ ಹಾಗೂ ಮಹಾರಾಜರ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ ಗ್ರಾಮಸ್ಥರೊಂದಿಗೆ ನೃತ್ಯ ಮಾಡಿದರು.
ಈ ಸಂದರ್ಭದಲ್ಲಿ ಪೂಜಾರಿ ಹೀರೂ ನಾಯಕ, ದೇವಿಂದ್ರ ಪವಾರ, ರಾಜೇಂದ್ರ ಜಾಧವ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.