
ರೇಕುಳಗಿ(ಜನವಾಡ): ಅರಾವಳಿ ಪರ್ವತ ಶ್ರೇಣಿ ನಾಶಕ್ಕೆ ಅವಕಾಶ ಕೊಡಬಾರದು ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ನಿಯಂತ್ರಣಾಧಿಕಾರಿ ವೀರಭದ್ರಪ್ಪ ಉಪ್ಪಿನ್ ಒತ್ತಾಯಿಸಿದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ವತಿಯಿಂದ ಬೀದರ್ ತಾಲ್ಲೂಕಿನ ರೇಕುಳಗಿ ಗ್ರಾಮದಲ್ಲಿ ಗುರುವಾರ ನಡೆದ ‘ಅರಾವಳಿ ಪರ್ವತ ಶ್ರೇಣಿ ಉಳಿಸಿ’ ಜಾಗೃತಿ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ರಾಜಸ್ತಾನ, ಗುಜರಾತ್, ಹರಿಯಾಣ ಹಾಗೂ ದೆಹಲಿ ರಾಜ್ಯಗಳಲ್ಲಿ 670 ಕಿ.ಮೀ ಉದ್ದ ಹರಡಿರುವ ಅರಾವಳಿ ಪರ್ವತ ಶ್ರೇಣಿ ನಾಲ್ಕೂ ರಾಜ್ಯಗಳಿಗೆ ರಕ್ಷಾ ಕವಚವಿದ್ದಂತೆ. ಇದನ್ನು ನಾಶಪಡಿಸಿ, ಗಣಿಗಾರಿಕೆ ಹಾಗೂ ನಗರೀಕರಣಕ್ಕೆ ಅವಕಾಶ ಕಲ್ಪಿಸುವ ಕಾಯ್ದೆ ರೂಪಿಸುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಆಚರಿಸಲಾಯಿತು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ, ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿದರು.
ಸಮಿತಿಯ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ, ಪ್ರಮುಖರಾದ ರಾಜಶೇಖರ ಬುಸ್ಸಾ, ಯುಸೂಫ್ ಅಲಿ, ಉಮಾದೇವಿ, ಗುರುನಾಥ, ಜೈಶ್ರೀ, ಜಗದೇವಿ, ರಾಜಶ್ರೀ, ಕಲಾವತಿ, ಸುಬ್ಬಮ್ಮ, ಶಾಂತಮ್ಮ, ಸುಧಾ, ಸವಿತಾ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.