ADVERTISEMENT

ಇಂದ್ರಮ್ಮಾಗೆ ಜಾನಪದ ಪ್ರಶಸ್ತಿ: ನಾಗರಿಕರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:37 IST
Last Updated 29 ಡಿಸೆಂಬರ್ 2025, 5:37 IST
ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಇಂದ್ರಮ್ಮ ಶಾಮರಾವ ಅವರನ್ನು ಸನ್ಮಾನಿಸಲಾಯಿತು
ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಇಂದ್ರಮ್ಮ ಶಾಮರಾವ ಅವರನ್ನು ಸನ್ಮಾನಿಸಲಾಯಿತು   

ಔರಾದ್: ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮ ಶಾಮರಾವ್ ಅವರಿಗೆ 2025ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದ್ದಕ್ಕೆ ನಾಗರಿಕರು ಸನ್ಮಾನಿಸಿದರು.

ಔರಾದ್ ನಾಗರಿಕರ ಪರವಾಗಿ ಕಾಯಕಯೋಗಿ ಟ್ರಸ್ಟ್ ವತಿಯಿಂದ ಶನಿವಾರ ಜೋಜನಾ ಗ್ರಾಮದಲ್ಲಿ ಇಂದ್ರಮ್ಮ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಅನೀಲ ಜಿರೋಬೆ ಮಾತನಾಡಿ, ‘ಇಂದ್ರಮ್ಮಾ ಅವರು ಕಳೆದ ಮೂರು ದಶಕದಿಂದ ಜಾನಪದ, ಹಂತಿ ಪದ, ಮೊಹರಂ ಪದ, ಭುಲಾಯಿ ಹಾಡು ಸೇರಿದಂತೆ ಗ್ರಾಮೀಣ ಜಾನಪದ ಕಲೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಸರ್ಕಾರ ಇಂತಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಶ್ಲಾಘನೀಯ ಎಂದರು.

ADVERTISEMENT

ನಿವೃತ್ತ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾವೆ, ಸಿದ್ರಾಮಪ್ಪ ನಿಡೋದೆ ಅವರು ಇಂದ್ರಮ್ಮ ಅವರ ಅದ್ಭುತ ಜಾನಪದ ಕಲೆಯನ್ನು ಕೊಂಡಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.