ಬೀದರ್: ವಿವಿಧ ಸಂಘ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಅದರ ವಿವರ ಹೀಗಿದೆ.
ಜಗನ್ನಾಥ ಮಂದಿರ:
ನಗರ ಹೊರವಲಯದ ಚಿಕ್ಕಪೇಟೆ ಸಮೀಪದ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಂಬೈ ಇಸ್ಕಾನ್ ಪ್ರಮುಖ ಅಶೋಕ ಕೃಷ್ಣದಾಸ್ ಪ್ರಭು ಮಾತನಾಡಿ, 'ಸಕಲ ಚರಾಚರ ಜೀವಿಗಳಲ್ಲಿ ಮನುಷ್ಯ ಜೀವಿಗೆ ಮೇರು ಸ್ಥಾನವಿದೆ. ಈ ಮನುಷ್ಯ ಜೀವನದಲ್ಲಿ ಮುಕ್ತಿ ದೇವನೊಲುಮೆ ಮತ್ತು ಮಾನವ ಜೀವನ ಸಾಫಲ್ಯ ಹೊಂದುವುದು ಸಾಧ್ಯವಿದೆ. ಇದಕ್ಕಾಗಿ ನಾವು ಕೃಷ್ಣ ಮಾರ್ಗ ಅನುಸರಿಸಬೇಕು" ಎಂದರು.
ದುಷ್ಟರನ್ನು ಶಿಕ್ಷಿಸಿ, ದಂಡನೆಗೆ ಗುರಿ ಮಾಡಿ, ಸರಿ ದಾರಿಗೆ ತರಬೇಕಾದುದು ಇಂದು ಜರೂರಾಗಿದೆ. ರಾಕ್ಷಸಿ ಪ್ರವೃತ್ತಿಯವರ ಮೇಲೆ ವಿಜಯ ಸಾಧಿಸುವುದು ಕೃಷ್ಣನ ಮಾರ್ಗದಿಂದ ಸಾಧ್ಯ ಎಂದು ಹೇಳಿದರು.
ಕೃಷ್ಣನ ಕುರಿತು ರೂಪಕ, ನೃತ್ಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕೊನೆಯಲ್ಲಿ ಕೃಷ್ಣನ ಮೆರವಣಿಗೆ, ತೊಟ್ಟಿಲು, ಆರತಿ, ಭಜನೆ, ಅಭಿಷೇಕ, ಕೀರ್ತನೆ ಸಂಭ್ರಮೊಲ್ಲಾಸದಿಂದ ಜರುಗಿತು. ಭಕ್ತರಿಗೆ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಡಾ. ನಿಲೇಶ ದೇಶಮುಖ, ರಾಜಕುಮಾರ ಅಳ್ಳೆ, ಶಿವರಾಮ ಜೋಶಿ, ಹನುಮಯ್ಯ ಅರ್ಥಮ್, ಡಾ. ಉಮೇಶ ಮಾಲಿಪಾಟೀಲ, ಕವಿರಾಜ ಹಲಮಡಗಿ, ಸಂಧ್ಯಾ ಜೋಶಿ, ಶ್ರೀನಿವಾಸ ದೇಶಮುಖ, ಸುಧೀರ್ ಶರ್ಮಾ, ಶಾಲಿವಾನ ಹಳ್ಳಿಖೇಡ್, ಗಿರೀಶ್ ಕುಲಕರ್ಣಿ, ಅಭಿಷೇಕ್ ಆನಂದೆ, ಸಿದ್ರಾಮ ಎಖ್ಖೆಳ್ಳಿಕರ್, ಮೋಹನರಾವ್ ಕುಲಕರ್ಣಿ, ಬಸವಚೇತನ ಇತರರಿದ್ದರು.
ಗ್ಲೋಬಲ್ ಸೈನಿಕ ಅಕಾಡೆಮಿ:
ನಗರ ಹೊರವಲಯದ ಬೆನಕನಳ್ಳಿ ರಸ್ತೆಯ ಶಾಲೆಯಲ್ಲಿ ಶ್ರದ್ಧಾ, ಭಕ್ತಿ ಹಾಗೂ ಸಡಗರದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಕೃಷ್ಣನ ಮೂರ್ತಿಗೆ ಪೂಜೆ ಸಲ್ಲಿಸಿ, ಜಯಘೋಷ ಹಾಕಲಾಯಿತು. ಮಕ್ಕಳು ರಾಧಾ–ಕೃಷ್ಣನಾಗಿ ಕಂಗೊಳಿಸಿದರು. ರಾಧೆ–ಕೃಷ್ಣರ ಓಡಾಟದಿಂದ ಶಾಲೆಯ ಪರಿಸರ ಬೃಂದಾವನದಂತಾಗಿತ್ತು.
ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ, ಆರ್. ಜಿ. ಮಠಪತಿ, ಪ್ರಾಂಶುಪಾಲ ಸಮೋದ್ ಮೋಹನ್, ಮುಖ್ಯಶಿಕ್ಷಕಿ ಜ್ಯೋತಿ ರಾಗಾ, ಪಿಆರ್‌ಒ ಕಾರಂಜಿ ಸ್ವಾಮಿ, ಸಂಯೋಜಕ ಸುಬೇದಾರ್ ಮಡೆಪ್ಪ, ಸುಬೇದಾರ್ ರಾಮಜೀ, ಸುಬೇದಾರ್ ಧನರಾಜ್ ಇದ್ದರು.
ಜಿಲ್ಲಾ ಬಿಜೆಪಿ ಕಚೇರಿ:
ನಗರದ ನೌಬಾದ್ ಸಮೀಪದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಅವರು ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಊಲ್ಲಾಸಿನಿ ವಿಕ್ರಂ ಮುದಾಳೆ, ಹಿರಿಯ ನಾಯಕಿ ಶಕುಂತಲಾ ಬೆಲ್ದಾಳೆ, ರಾಜಕುಮಾರ ಪಾಟೀಲ, ಮಹಾನಂದಾ ಎಸ್. ಪಾಟೀಲ, ರೂಪಾವತಿ ಜಾಧವ್, ರುಕ್ಮಿಣಿ, ಉಮಾ, ಗಂಗೋತ್ರಿ, ವಜ್ರೇಶ್ವರಿ, ಗೋಪಾಲ ಕುಕಡಾಲ, ಬಸವ ಮೂಲಗೆ, ಶ್ರೀನಿವಾಸ ಚೌಧರಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.