ADVERTISEMENT

ಆಶಾರಾಣಿ ವಿಲಿಯಂ ಮೇತ್ರೆ ಅವರ ‘ಮರೀಚಿಕೆ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 12:01 IST
Last Updated 11 ಜನವರಿ 2022, 12:01 IST
ಬೀದರ್ ಜಿಲ್ಲೆಯ ಲೇಖಕಿ ಆಶಾರಾಣಿ ವಿಲಿಯಂ ಮೇತ್ರೆ ಅವರ ಚೊಚ್ಚಲ ಕೃತಿ ‘ಮರೀಚಿಕೆ’ಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಹಂಪ ನಾಗರಾಜಯ್ಯ ಬಿಡುಗಡೆ ಮಾಡಿದರು
ಬೀದರ್ ಜಿಲ್ಲೆಯ ಲೇಖಕಿ ಆಶಾರಾಣಿ ವಿಲಿಯಂ ಮೇತ್ರೆ ಅವರ ಚೊಚ್ಚಲ ಕೃತಿ ‘ಮರೀಚಿಕೆ’ಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಹಂಪ ನಾಗರಾಜಯ್ಯ ಬಿಡುಗಡೆ ಮಾಡಿದರು   

ಬೀದರ್: ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾದ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದ ಲೇಖಕಿ ಆಶಾರಾಣಿ ವಿಲಿಯಂ ಮೇತ್ರೆ ಅವರ ‘ಮರೀಚಿಕೆ’ ಕೃತಿಯನ್ನುಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

ಸಾಮಾಜಿಕ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ 62 ಗಜಲ್‍ಗಳನ್ನು ಒಳಗೊಂಡ 72 ಪುಟಗಳ ‘ಮರೀಚಿಕೆ’ಯು ಆಶಾರಾಣಿ ಅವರ ಚೊಚ್ಚಲ ಕೃತಿಯಾಗಿದೆ. ಆಶಾರಾಣಿ, ಉಡಮನಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿದ್ದಾರೆ.

ಸಮಾರಂಭದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ, ಡಾ.ಎಂ.ಎಸ್. ನಂದಿ ಹಂಚೆ, ಕನ್ನಡ ಪುಸ್ತಕ ಪ್ರಾಧಿಕಾರದ ಕೆ.ಬಿ. ಕಿರಣ ಸಿಂಗ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.