ADVERTISEMENT

ಔರಾದ್: ತಿರಂಗಾ ಯಾತ್ರೆ ವೇಳೆ ಶಾಸಕ ಪ್ರಭು ಚವಾಣ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 26 ಮೇ 2025, 7:22 IST
Last Updated 26 ಮೇ 2025, 7:22 IST
   

ಔರಾದ್ (ಬೀದರ್): ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ತಿರಂಗಾ ಯಾತ್ರೆ ಮೆರವಣಿಗೆ ವೇಳೆ ಶಾಸಕ ಪ್ರಭು ಚವಾಣ್ ಅಸ್ವಸ್ಥಗೊಂಡಿದ್ದಾರೆ.

‘ಆಪರೇಶನ್ ಸಿಂಧೂರ’ ಯಶಸ್ಸು ಹಾಗೂ ರಾಷ್ಟ್ರ ರಕ್ಷಣೆಗಾಗಿ ಪಟ್ಟಣದಲ್ಲಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪ್ರವಾಸಿ ಮಂದಿರದಿಂದ ಹೊರಟ ಯಾತ್ರೆ ಕನ್ನಡಾಂಬೆ ವೃತ ತಲುಪಿ ಅಲ್ಲಿ ಸಮಾವೇಶಗೊಂಡು ಭಾಷಣ ನಡೆಯುವ ವೇಳೆ ಶಾಸಕರು ನಿಶಕ್ತರಾದರು. ಅಲ್ಲಿದ್ದವರು ತಕ್ಷಣ ಅವರನ್ನು ಕಾರಿನಲ್ಲಿ ಸಾರ್ವಜನಿಕ ಆಸ್ಪತ್ರೆ ಕರೆದೊಯ್ದರು.

ಶಾಸಕರು ಮೆರವಣಿಗೆಯಲ್ಲಿ ಕುಣಿದು ದಣಿದಿದ್ದಾರೆ. ಹೀಗಾಗಿ ಸುಸ್ತಾಗಿ ತಲೆ ಸುತ್ತಿದೆ. ಬೇರೆ ಏನು ಸಮಸ್ಯೆ ಇಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.