ADVERTISEMENT

ರಾಷ್ಟ್ರೀಯ ಜನಪದ ನೃತ್ಯೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 15:06 IST
Last Updated 23 ಸೆಪ್ಟೆಂಬರ್ 2021, 15:06 IST

ಬೀದರ್‌: ದೆಹಲಿಯ ಸಂಸ್ಕೃತಿ ಸಚಿವಾಲಯ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ನಾಗಪುರದ ದಕ್ಷಿಣ ವಲಯ ಕೇಂದ್ರದ ಆಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಸೆ.24 ಹಾಗೂ 25ರಂದು ರಾಷ್ಟ್ರೀಯ ಜನಪದ ನೃತ್ಯೋತ್ಸವ ನಡೆಯಲಿದೆ.

ಸೆ. 24 ರಂದು ಸಂಜೆ 4.30ಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗೆ, ಗುರುನಾನಕದೇವ ಫೌಂಡೇಶನ್ ಅಧ್ಯಕ್ಷ ಬಲಬೀರಸಿಂಗ್, ಹರಿಯಾಣಾದ ಜನಸೇವಾ ಕಲಾ ಸಮಿತಿ ಅಧ್ಯಕ್ಷ ಅಶೋಕ ಗುಡ್ಡು, ಪ್ರತಿಭಾ ಚಾಮಾ ಪಾಲ್ಗೊಳ್ಳಲಿದ್ದಾರೆ.

ನೃತ್ಯೋತ್ಸವದಲ್ಲಿ ಹರಿಯಾಣದ ಶಿವಶೃತಿ ಫಾಗ್ ಗೋಮರ್ ನೃತ್ಯತಂಡ, ನಾಗಲ್ಯಾಂಡ್‍ನ ಮಮಿತಾ ಜನಪದ ನೃತ್ಯ, ಮಹಾರಾಷ್ಟ್ರದ ಸೋಂಗಿ ಮುಖವಟಿ ನೃತ್ಯ, ಮಧ್ಯಪ್ರದೇಶದ ಗುದುಮಬಾಜಾ ಹಾಗೂ ಬದಾಯಿ ಜನಪದ ನೃತ್ಯ, ಛತ್ತಿಸಗಢದ ಪಂತಿ ಜನಪದ ನೃತ್ಯ, ಕರ್ನಾಟಕದ ಬಂಜಾರಾ ಲಂಬಾಣಿ ನೃತ್ಯ, ಓಡಿಶಾದ ಸಂಬಲಪೂರಿ ನೃತ್ಯತಂಡ, ಪಂಜಾಬನ ಭಾಂಗಡಾ ನೃತ್ಯ ತಂಡಗಳು ಭಾಗವಹಿಸಲಿವೆ.

ADVERTISEMENT

ಸೆ. 25 ರಂದು ಬೆಳಿಗ್ಗೆ 11 ಗಂಟೆಗೆ ಪ್ರಬಂಧ ಮಂಡನೆ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸುವರು. ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಮಕಾಂತ ಪಾಟಿಲ, ಚಂದ್ರಪ್ಪ ಭತಮುರ್ಗೆ.ಶಂಕರರಾವ್‌ ಹೊನ್ನಾ, ಅರುಣಾ ಸುಲ್ತಾನಪುರೆ.ವಿನೋದ ಮೂಲಗೆ, ವೈಜನಾಥ ಚಿಕ್ಕಬಸೆ, ಸಾಧನಾ ರಂಜೋಳಕರ್, ಪುಷ್ಪಾ ಕನಕ ಪಾಲ್ಗೊಳ್ಳುವರು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ರಾಜಕುಮಾರ ಹೆಬ್ಬಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.