ADVERTISEMENT

ಚನ್ನಬಸವ ನಗರ, ಗೋರನಳ್ಳಿಗೆ ಬಸ್‌ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 7:29 IST
Last Updated 2 ನವೆಂಬರ್ 2025, 7:29 IST
ಬೀದರ್‌ನ ಚನ್ನಬಸವ ನಗರದ ನಿವಾಸಿಗಳು ನೂತನ ಬಸ್‌ ಸೇವೆ ಸ್ವಾಗತಿಸಿ, ಚಾಲಕ ಹಾಗೂ ನಿರ್ವಾಹಕನನ್ನು ಸನ್ಮಾನಿಸಿದರು
ಬೀದರ್‌ನ ಚನ್ನಬಸವ ನಗರದ ನಿವಾಸಿಗಳು ನೂತನ ಬಸ್‌ ಸೇವೆ ಸ್ವಾಗತಿಸಿ, ಚಾಲಕ ಹಾಗೂ ನಿರ್ವಾಹಕನನ್ನು ಸನ್ಮಾನಿಸಿದರು   

ಬೀದರ್‌: ನಗರದ ಚನ್ನಬಸವ ನಗರ ಹಾಗೂ ಗೋರನಳ್ಳಿಗೆ ಸಾರಿಗೆ ಸಂಸ್ಥೆಯು ನೂತನವಾಗಿ ಬಸ್‌ ಸಂಚಾರ ಆರಂಭಿಸಿದೆ.

ಪ್ರತಿದಿನ ಬೆಳಿಗ್ಗೆ 9ಕ್ಕೆ ಕೇಂದ್ರ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌, ಚನ್ನಬಸವ ನಗರ ಬಡಾವಣೆಯ ಮೂಲಕ ಗೋರನಳ್ಳಿ ತಲುಪುತ್ತದೆ. ಬೆಳಿಗ್ಗೆ 9.35ಕ್ಕೆ ಗೋರನಳ್ಳಿಯಿಂದ ಹೊರಟು ಚನ್ನಬಸವ ನಗರ ಬಡಾವಣೆ, ಹಾರೂರಗೇರಿ ಮೂಲಕ 10.10ಕ್ಕೆ ಕೇಂದ್ರ ಬಸ್‌ ನಿಲ್ದಾಣ ಸೇರುತ್ತದೆ. 

ಸಂಜೆ 4ಕ್ಕೆ ಕೇಂದ್ರ ಬಸ್‌ ನಿಲ್ದಾಣದಿಂದ ಹೊರಡುತ್ತದೆ. ಸಂಜೆ 4.45ಕ್ಕೆ ಗೋರನಳ್ಳಿಯಿಂದ ಹೊರಡುವ ಬಸ್‌ ಸಂಜೆ 5.10ಕ್ಕೆ ಕೇಂದ್ರ ಬಸ್‌ ನಿಲ್ದಾಣ ತಲುಪುತ್ತದೆ. ನೂತನ ಬಸ್‌ ಸೇವೆಗೆ ಸ್ಥಳೀಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. 

ADVERTISEMENT

ಬಡಾವಣೆಯ ಶಿವರಾಜ್ ಕೊಡ್ಡೆ, ರೇವಣಸಿದ್ದಯ್ಯ ಸ್ವಾಮಿ, ಶಿವದತ್ತ ಒಡೆಯರ್, ವಿಶ್ವನಾಥ ಶಿವಯೋಗಿ, ಶಿವಪ್ರಕಾಶ ಹಿರೇಮಠ, ಸಂಗ್ರಾಮ, ಸಂಜು ಕುಮಾರ್ ಮೇತ್ರೆ, ಶ್ರವಣ ಕುಮಾರ್, ದೇವೇಂದ್ರ ಕರಂಜಿ, ಶಿವಯೋಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.