ಬೀದರ್: ಹಾಲಿ ಜಿಲ್ಲಾಧಿಕಾರಿ ಕಟ್ಟಡದ ಸ್ಥಳದಲ್ಲಿ ಹೊಸ ಪ್ರಜಾ ಸೌಧ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದು, ಅಲ್ಲಿರುವ ವಿವಿಧ ಇಲಾಖೆಯ ಕಚೇರಿಗಳನ್ನು ಜು. 10ರಂದು ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಹೊಸ ಜಿಲ್ಲಾಡಳಿತ ಭವನ ನಿರ್ಮಾಣ ಆಗುವವರೆಗೆ ಈ ಕಚೇರಿಗಳು ಬೇರೆ ಕಡೆ ಕೆಲಸ ನಿರ್ವಹಿಸಲಿವೆ. ಅವುಗಳ ವಿಳಾಸ ಇಂತಿದೆ.
ಬೀದರ್ ಜಿಲ್ಲಾಧಿಕಾರಿ ಕಚೇರಿ ಚಿಕ್ಕಪೇಟೆ ರಸ್ತೆಯ ಗಾಂಧಿ ಭವನ, ಉಪವಿಭಾಗಾಧಿಕಾರಿ ಕಚೇರಿ - ಜನವಾಡ ರಸ್ತೆಯ ಕೇಂದ್ರ ಗ್ರಂಥಾಲಯ ಕಟ್ಟಡದ ಮೊದಲನೇ ಮಹಡಿ, ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ-ರೇಷ್ಮೆ ಇಲಾಖೆ ಕಟ್ಟಡದ ಮೊದಲನೇ ಮಹಡಿಯ ಉಪನಿರ್ದೇಶಕರ ಕಚೇರಿಗೆ, ಉಪ ನೋಂದಣಾಧಿಕಾರಿಗಳ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರ ಕಚೇರಿ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರ ಕಚೇರಿ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿ, ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೊದ್ದೇಶ ಸಹಕಾರ ಸಂಘ ನಿಯಮಿತದ ಜಿಲ್ಲಾಧಿಕಾರಿ ಕಚೇರಿಗಳನ್ನು ಚಿಕ್ಕಪೇಟೆಯ ಮೌಲಾನಾ ಆಜಾದ್ ಭವನ, ಪ್ರವಾಸೋದ್ಯಮ ಇಲಾಖೆಯ ಕಚೇರಿ-ಗುರುನಾನಕ ಸಮೀಪದ ಕನ್ನಡ ಭವನ, ನಗರಾಭಿವೃದ್ಧಿ ಕೋಶದ ಕಚೇರಿ- ಚಿಕ್ಕಪೇಟೆ ಬೊಮ್ಮಗೊಂಡೇಶ್ವರ ಸಮುದಾಯ (ಗೊಂಡ) ಭವನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.