ADVERTISEMENT

ಷಾ ರಶೀದ್‌ ಅಹಮ್ಮದ್ ಖಾದ್ರಿ ಪದ್ಮಶ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:49 IST
Last Updated 26 ಜನವರಿ 2023, 5:49 IST
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಷಾ ರಶೀದ್‌ ಅಹಮ್ಮದ್ ಖಾದ್ರಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಷಾ ರಶೀದ್‌ ಅಹಮ್ಮದ್ ಖಾದ್ರಿ   

ಬೀದರ್‌: ಬೀದರ್‌ನ ಬಿದರಿ ಕಲಾವಿದ ಷಾ ರಶೀದ್‌ ಅಹಮ್ಮದ್ ಖಾದ್ರಿ ಅವರಿಗೆ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ.

ಷಾ ರಶೀದ್‌ ಅಹಮ್ಮದ್ ಖಾದ್ರಿ ಅವರು ತಮ್ಮ ಪೂರ್ವಜರ ಕಾಲದಿಂದಲೂ ಬಿದರಿ ಕಲೆ ಮುಂದುವರಿಸಿಕೊಂಡು ಬಂದಿದ್ದಾರೆ. 1955ರಲ್ಲಿ ಜನಿಸಿದ ಇವರು ಪಿಯುಸಿ ಓದಿದ್ದಾರೆ. ತಂದೆಯ ಗರಡಿಯಲ್ಲೇ ಬೆಳೆದು ಪ್ರಾಚೀನ ಕರಕುಶಲತೆಯನ್ನು ಉಳಿಸಿಕೊಂಡು ಬಂದಿದ್ದಾರೆ.

1970ರಿಂದ ಸ್ವತಂತ್ರವಾಗಿ ಕಾರ್ಯ ಆರಂಭಿಸಿ ಹೊಸ ವಿನ್ಯಾಸಗಳನ್ನು ಪರಿಚಯಿಸಿದ್ದಾರೆ. ಇವರಿಗೆ 2012 ರಲ್ಲಿ ಶಿಲ್ಪ ಗುರು ಪ್ರಶಸ್ತಿ, 9881ರಲ್ಲಿ ರಾಷ್ಟ್ರ ಪ್ರಶಸ್ತಿ 2006 ರ ಸುವರ್ಣ ಕರ್ನಾಟಕ ರಾಜ್ಯ ಉತ್ಸವ ಪ್ರಶಸ್ತಿ, 2004 ರಲ್ಲಿ ಗ್ರೇಟ್ ಇನಿಡ್ನಾ ಅಚೀವರ್ಸ್ ಪ್ರಶಸ್ತಿ, 1996 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಶಿಲ್ಪ ಗುರು ಪ್ರಶಸ್ತಿ, 2015ರಲ್ಲಿ ರಂದು ರಾಷ್ಟ್ರಪ್ರಶಸ್ತಿ ದೊರಕಿದೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ರಾಷ್ಟ್ರಪತಿ ಆರ್.ಎಸ್. ವೆಂಕಟರಮನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ADVERTISEMENT

ದೇಶ– ವಿದೇಶಗಳಲ್ಲಿ ಪ್ರದರ್ಶನ ಆಯೋಜಿಸಿ ಬಿದರಿ ಕಲೆ ಪರಿಚಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.